ಎಸ್‌ಬಿಐ ಎಫ್‌ಡಿ ಬಡ್ಡಿದರ ಶೇ.0.25ರವರೆಗೆ ಹೆಚ್ಚಳ

First Published May 31, 2018, 1:25 PM IST
Highlights

ಸದಾ ಬಡ್ಡಿ ದರ ಇಳಿಕೆ ಸುದ್ದಿ ಕೇಳುತ್ತಲೇ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಸಿಹಿ ಸುದ್ದಿ ಇದೆ. ಇದೀಗ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ತುಸು ಹೆಚ್ಚಾಗಿದ್ದು, ಕೆಲವು ನಿಗದಿತ ಠೇವಣಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. 

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ತನ್ನ ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಬ್ಯಾಂಕ್‌ನ ನಿಶ್ಚಿತ ಠೇವಣಿ (ಎಫ್‌ಡಿ) ಬಡ್ಡಿಯನ್ನು ಶೇ.0.25ರವರೆಗೆ ಪರಿಷ್ಕರಿಸಲಾಗಿದೆ. 1 ಕೋಟಿ ರುಪಾಯಿವರೆಗಿನ ಕೆಲವು ಆಯ್ದ ನಿಶ್ಚಿತ ಠೇವಣಿಗಳಿಗೆ ಇದು ಅನ್ವಯವಾಗಲಿದೆ.

1 ವರ್ಷದಿಂದ 2 ವರ್ಷದ ಒಳಗಿನ ಠೇವಣಿಗೆ ಈವರೆಗೆ ಶೇ.6.40 ಬಡ್ಡಿ ಸಿಗುತ್ತಿತ್ತು. ಇದು ಈಗ ಶೇ.6.65ಕ್ಕೇರಲಿದೆ. 2ರಿಂದ 3 ವರ್ಷದೊಳಗಿನ ಠೇವಣಿಗೆ ಶೇ.6.65ರಷ್ಟುಬಡ್ಡಿ ಸಿಗಲಿದೆ. ಈವರೆಗೆ ಶೇ.6.60ಯಷ್ಟುಬಡ್ಡಿ ಲಭಿಸುತ್ತಿತ್ತು. ಇನ್ನು ಹಿರಿಯ ನಾಗರಿಗರಿಗೆ 1ರಿಂದ 2 ವರ್ಷದೊಳಗಿನ ಠೇವಣಿಗೆ ಶೇ.7.15 ಬಡ್ಡಿ ಲಭಿಸಲಿದೆ (ಈವರೆಗೆ ಶೇ.6.90). 2ರಿಂದ 3 ವರ್ಷದೊಳಗೆ ಶೇ.7.15ರಷ್ಟುಬಡ್ಡಿ ಸಿಗಲಿದೆ (ಈವರೆಗೆ ಶೇ.7.10).

ಇತರೆ ಬ್ಯಾಂಕ್‌ಗಳೂ ಶೀಘ್ರ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ.
 

click me!