ಪ್ರಧಾನಿ ವಿರುದ್ಧವೇ ತಿರುಗಿಬಿದ್ದ ಸಂಸತ್

By Web DeskFirst Published Nov 15, 2018, 10:45 AM IST
Highlights

ಪ್ರಧಾನಿ ವಿರುದ್ಧವೇ ಸಂಪೂರ್ಣ ಸಂಸತ್ ತಿರುಗಿ ಬಿದ್ದಿದೆ. ಪ್ರಧಾನಿ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲಾಗಿದೆ. 

ಕೊಲಂಬೋ: ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಜ.5ರಂದು ಚುನಾವಣೆ ಹೇರಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ವಿವಾದಿತ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದ ಬೆನ್ನಲ್ಲೇ, ಪ್ರಧಾನಿಯಾಗಿ ನಿಯೋಜನೆಗೊಂಡಿದ್ದ ಮಹಿಂದ ರಾಜಪಕ್ಸೆ ವಿರುದ್ಧ ಸಂಸತ್ತು ಬುಧವಾರ ಅವಿಶ್ವಾಸಗೊತ್ತುವಳಿಯೊಂದನ್ನು ಅಂಗೀಕರಿಸಿದೆ. 

ಸುಪ್ರೀಂಕೋರ್ಟ್‌ ಆದೇಶದ ಮರುದಿನವೇ ಸಂಸತ್‌ ಕರೆಯಲಾಗಿತ್ತು. 225 ಸದಸ್ಯ ಬಲದ ಸಂಸತ್ತಿನಲ್ಲಿ ರಾಜಪಕ್ಸೆ ಬಹುಮತಕ್ಕೆ ಅಗತ್ಯವಿರುವ 113 ಸದಸ್ಯರ ಬೆಂಬಲ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಅವಿಶ್ವಾಸಗೊತ್ತುವಳಿಗೆ ಗೆಲುವಾಗಿದೆ ಎಂದು ಸ್ಪೀಕರ್‌ ಕರು ಜಯಸೂರ್ಯ ಘೋಷಿಸಿದ್ದಾರೆ. ಹೀಗಾಗಿ ರಾಜಪಕ್ಸೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದು ಅನಿವಾರ್ಯವಾಗಿದೆ.

click me!