
ನವದೆಹಲಿ(ಡಿ.07): ಭೀಮಾನಾಯ್ಕ್ ಅವರನ್ನ ಬಳಸಿಕೊಂಡು ಜನಾರ್ದನರೆಡ್ಡಿ ತಮ್ಮ ಮಗಳ ಮದುವೆಗೆ ಬ್ಲಾಕ್ ಮನಿಯನ್ನ ವೈಟ್ ಮಾಡಿಕೊಂಡರು ಎಂದು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಡ್ರೈವರ್ ರಮೇಶ್ ಗೌಡ್ ಡೆತ್ ನೋಟ್`ನಲ್ಲಿ ಉಲ್ಲೇಖಿಸಿರುವ ಬಗ್ಗೆ ಸಂಸದ ಶ್ರೀರಾಮುಲು ಖಾರವಾಗಿ ಉತ್ತರಿಸಿದ್ದಾರೆ.
ನನ್ನ ಜೀವನದಲ್ಲಿ ವೈಟ್ ಅಂಡ್ ಬ್ಲಾಕ್ ಗೊತ್ತಿಲ್ಲ. ಒಬ್ಬ ತಹಸೀಲ್ದಾರ್ ಭೀಮಾನಾಯ್ಕ್ ಬಳಿ ಅಷ್ಟೊಂದು ಹಣ ೆಲ್ಲಿಂದ ಬರುತ್ತೆ. ಭೀಮಾನಾಯ್ಕ್ ಜೊತೆ ಅವನು ಜಗಳ ಮಾಡಿಕೊಂಡರೆ ನಮಗೂ ಅದಕ್ಕೂ ಏನೂ ಸಂಬಂಧ..? ಜನಾರ್ದನರೆಡ್ಡಿಯನ್ನ, ನಮ್ಮನ್ನ ಬಹಳಷ್ಟು ಜನ ಭೇಟಿ ಮಾಡಿತ್ತಾರೆ. ತಹಸೀಲ್ದಾರ್ ಆಗಿದ್ದರಿಂದ ಭೇಟಿ ಮಾಡಿರಬಹುದು. ಎಷ್ಟೋ ಮಂದಿ ಬಂದು ಹೋಗ್ತಾರೆ. ಯಾರೋ ಡೆತ್ ನೋಟ್`ನಲ್ಲಿ ಬರೆದರೆ ನಮಗೇನು ಸಂಬಂಧ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.