
ಬಳ್ಳಾರಿ: ಬಳ್ಳಾರಿಯವರು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡ್ತೀವಿ. ನಿನ್ನನ್ನು ಕೆಡವಿ ಹಾಕ್ತೀವಿ ನೆನಪಿಟ್ಟುಕೊಳ್ಳಪ್ಪಾ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದ್ದಾರೆ.
ಶನಿವಾರ ಪ್ರಚಾರ ಸಭೆಯಲ್ಲಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ನನಗೆ ಕನ್ನಡ ಬರೋಲ್ಲ ಅಂತಾನ. ಆತನಿಗೆ ಸರಿಯಾಗಿ ಕನ್ನಡ ಬರುತ್ತಾ? ಹಾಗಾದ್ರೆ ‘ಪಕ್ಷ’ ಮತ್ತು ‘ಲಕ್ಷ’ ಈ ಎರಡು ಶಬ್ದಗಳನ್ನು ಸ್ಪಷ್ಟವಾಗಿ ಹೇಳಿಬಿಡಲಿ ನೋಡೋಣ. ನನಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್‌ನವರು ಗಂಡಸರಾದ್ರೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಅಭ್ಯರ್ಥಿ ಹಾಕಿ ಗೆದ್ದು ಬನ್ನಿ. ನಿಮಗೆ (ಕಾಂಗ್ರೆಸ್‌ನವರಿಗೆ) ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಾದರೂ ಇದೆಯಾ? ಎಂದು ಕೇಳಿದರು. ‘ಸಿದ್ದರಾಮಯ್ಯ ನನ್ನನ್ನು 420 ಅಂತ ಕರೆದ. ನಮಗೂ ಬೈಯಾಕ ಬರುತ್ತೆ’ ಎಂದರು.
‘ನನಗೆ ನಿನ್ನಂಗ ರಾಗಾ ಎಳೆದು ಮಾತನಾಡಲು ಬರಲ್ಲ. ನಾವು ನೇರಾ ನೇರ ಮಂದಿ. ಮನಸ್ನ್ಯಾಗ ಒಂದು, ಹೊರಗೊಂದು ಇಟ್ಟುಕೊಂಡು ಮಾತನಾಡಲ್ಲ. ನಾವು ಆಂಧ್ರ ಗಡಿಭಾಗದಲ್ಲಿ ಇದ್ದೀವಿ. ಹೀಗಾಗಿ ಒಂದಷ್ಟುಮಾತ್ನ್ಯಾಗ ತೊಡಕು ಆಗುತ್ತೆ. ನಿನ್ನಂಗ ದೊಡ್ಡ ಪಂಡಿತ ನಾನಲ್ಲಪ್ಪಾ. ಹಾಗೆಲ್ಲ ಬೇರೆಯವರನ್ನು ಹೀಯಾಳಿಸಬಾರ್ದಪ್ಪಾ’ ಎಂದು ರಾಮುಲು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.