ಈ ರಾಶಿಗೆ ಧನ ಸಮೃದ್ಧಿಯಾಗಲಿದೆ : ಉಳಿದ ರಾಶಿ ಹೇಗಿದೆ..?

Published : Nov 27, 2018, 11:02 AM IST
ಈ ರಾಶಿಗೆ ಧನ ಸಮೃದ್ಧಿಯಾಗಲಿದೆ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಈ ರಾಶಿಗೆ ಧನ ಸಮೃದ್ಧಿಯಾಗಲಿದೆ : ಉಳಿದ ರಾಶಿ ಹೇಗಿದೆ..?

ಈ ರಾಶಿಗೆ ಧನ ಸಮೃದ್ಧಿಯಾಗಲಿದೆ : ಉಳಿದ ರಾಶಿ ಹೇಗಿದೆ..?

27-11-18 - ಮಂಗಳವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಪಂಚಮಿ ತಿಥಿ
ಪುನರ್ವಸು ನಕ್ಷತ್ರ 

ರಾಹುಕಾಲ : 02.58 ರಿಂದ 04.24
ಯಮಗಂಡ ಕಾಲ : 09.16 ರಿಂದ 10.42
ಗುಳಿಕ ಕಾಲ : 12.07 ರಿಂದ 01.33

 
ಮೇಷ ರಾಶಿ : ದಿನ ಪ್ರಾರಂಭಿಸುವ ಮುನ್ನ 12 ಬಾರಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ನಿಮ್ಮ ಧನ ಸಮೃದ್ಧಿಯಾಗಲಿದೆ, ಕುಟುಂಬದವರಿಂದ ಸಹಾಯ ಸಿಗಲಿದೆ, ವಾಹನ ಖರೀದಿಯಬಗ್ಗೆ ಯೋಚನೆ ಮಾಡುವ ದಿನ, ಹಳೆ ವಸ್ತುಗಳ ಮಾರಾಟ ಮಾಡುವ ಮನಸ್ಸು. ದೈವಾನುಕೂಲವೂ ಇದೆ.
  
ದೋಷಪರಿಹಾರ : ಕೆಂಪು ವಸ್ತ್ರವನ್ನು  ದಾನ ಮಾಡಿ

ವೃಷಭ : ದಿನ ಪ್ರಾರಂಭವಾಗುವ ಮುನ್ನ ಲಕ್ಷ್ಮೀ ಸ್ತೋತ್ರವನ್ನು 12 ಬಾರಿ ಪಠಿಸಿ. ನಿಮ್ಮ ಮನಸ್ಸಿಗೆ ಇಂದು ಸಮಾಧಾನದ ದಿನ, ನಿಮ್ಮ ಬಂಧುಗಳಿಂದ ಪ್ರಶಂಸೆ ಹಾಗೂ ನಿಮ್ಮ ಕಾರ್ಯ ವೃದ್ಧಿಯೂ ಆಗಲಿದೆ.  

ದೋಷ ಪರಿಹಾರ : ಕ್ಷೀರ ದಾನ ಮಾಡಿ.

ಮಿಥುನ : ಗುರು ಚರಿತ್ರೆ ಪಠಿಸುವ ಮೂಲಕ ದಿನ ಪ್ರಾರಂಭ ಮಾಡಿ.  ನಿಮ್ಮ ಕಾರ್ಯಗಳು ಕೈಗೂಡುವ ದಿನವಾಗಿದೆ. ಮಕ್ಕಳಿಂದ ಶುಭ ವಾರ್ತೆ ಕೇಳಲಿದ್ದೀರಿ. ಶುಭ ದಿನ. ದಾಂಪತ್ಯದಲ್ಲಿ ಹೊಂದಾಣಿಕೆ ಸಮಸ್ಯೆ ಕಾಡುತ್ತದೆ. ಸಮಾಧಾನವಿರಲಿ. 

ದೋಷ ಪರಿಹಾರ : ಹರಿವಂಶ ಪುಸ್ತಕವನ್ನು ದಾನ ಮಾಡಿ.

ಕಟಕ : ಆರೋಗ್ಯ ಸಮಸ್ಯೆ, ಮಾನಸಿಕ ಅಸಮಧಾನ, ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳ ಕಾಟ, ಯಾವುದೇ ನಿರ್ಧಾರಕ್ಕೆ ಬೆಲೆ ಇಲ್ಲದಾಗುತ್ತದೆ, ನಿಮ್ಮ ಮನೋ ಫಲ ಇಡೇರ ಬೇಕಿದ್ದರೆ ಜಲ ದುರ್ಗಾ ದೇವಿಯ ಪ್ರಾರ್ಥನೆ ಮಾಡಿ. 
  
ದೋಷ ಪರಿಹಾರ : 2 ಕೆ.ಜಿ ಅಕ್ಕಿ ದಾನ ಮಾಡಿ.

ಸಿಂಹ : ಬೆಳಗ್ಗೆ ಎದ್ದ ಕೂಡಲೇ ಸೂರ್ಯ ದರ್ಶನ ಮಾಡುತ್ತಾ 108 ಬಾರಿ ಗಾಯತ್ರೀ ಮಂತ್ರ ಪಠಿಸಿ. ನಿಮ್ಮ ಕಾರ್ಯಲಾಭವಾಗಲಿದೆ. ಅಷ್ಟೇ ಅಲ್ಲ ಇಂದು ಧನ ವ್ಯಯವಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಆಪ್ತರ ಸಹಾಯ.

ದೋಷ ಪರಿಹಾರ : ಗೋಧಿಯನ್ನು ದಾನ ಮಾಡಿ

ಕನ್ಯಾ :  ಅತಿಥಿಗಳಿಗೆ ಸಹಾಯ ಮಾಡುವ ಮೂಲಕ ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ಧನ ಸಮೃದ್ಧಗೊಳ್ಳಲಿದೆ. ಉತ್ತಮ ದಿನವಾಗಿರಲಿದೆ.
  
ದೋಷ ಪರಿಹಾರ : ಸುಮಂಗಲೆಯರಿಗೆ ವಸ್ತ್ರ ದಾನ ಮಾಡಿ.

ತುಲಾ :   ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು, ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯೂ ಆಗಬಹುದು. ನಿಮ್ಮ ಗುಂಪಿಗೆ ನಿಮ್ಮ ವಲಯಕ್ಕೆ ಸೇರದ ಒಬ್ಬರು ಕಿರಿಕಿರಿ ಉಂಟುಮಾಡುತ್ತಾರೆ. ಎಚ್ಚರವಾಗಿರಿ.

ದೋಷ ಪರಿಹಾರ : ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ

ವೃಶ್ಚಿಕ : ನಿಮ್ಮ ತಾಯಿಗೆ ನಮಸ್ಕಾರ ಮಾಡಿ ಈದಿನದ ಕಾರ್ಯ ಪ್ರಾರಂಭ ಮಾಡಿ. ನಿಮ್ಮ ಸಂಗಾತಿಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮ ಸಹೋದರರು ನಿಮ್ಮ ಸಹಾಯಕ್ಕೆ ಬರುತ್ತಾರೆ. ತಂದೆಯಿಂದ ಸಹಾಯ ದೊರೆಯುತ್ತದೆ. 

ದೋಷ ಪರಿಹಾರ : ಹಣ್ಣುಗಳನ್ನು ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಿಸಿ.

ಧನಸ್ಸು : ಅರಳಿ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ನಿಮ್ಮ ನರ ದೌರ್ಬಲ್ಯ ಇಂದು ನಿಮ್ಮನ್ನು ಕಾಡಲಿದೆ, ಅಷ್ಟೇ ಅಲ್ಲ ನಿಮ್ಮ ದೇಹ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿ.

ದೋಷ ಪರಿಹಾರ : ಗುರು ಚರಿತ್ರೆ ಪುಸ್ತಕವನ್ನು ಓದುವವರಿಗೆ ದಾನ ಮಾಡಿ.

ಮಕರ :  ಇಂದು ನಿಮ್ಮ ಸೇವಕರಿಗೆ ಅಥವಾ ನಿಮ್ಮ ಕಾರ್ಯ ಮಾಡುವ ಸಹಾಯಕರಿಗೆ ವಸ್ತ್ರ ದಾನ ಮಾಡುವ ಮೂಲಕ ನಿಮ್ಮ ದಿನವನ್ನು ಪ್ರಾರಂಭ ಮಾಡಿ. ನಿಮ್ಮ ಕಾರ್ಯ ಅನುಕೂಲವಾಗಲಿದೆ. ಹಿರಿಯರ ಮಾರ್ಗ ದರ್ಶನ ಸಿಗಲಿದೆ. ಉತ್ತಮ ದಿನ.
  
ದೋಷ ಪರಿಹಾರ : ದೀಪ ದಾನ ಮಾಡಿ

ಕುಂಭ : ನಿಮ್ಮ ಕಾರ್ಯ ಆರಂಭವಾಗುವ ಮುನ್ನ ಪಕ್ಷಿಗಳಿಗೆ ಧಾನ್ಯ ಹಾಗೂ ನೀರು ಹಾಕಿ ಕಾರ್ಯ ಪ್ರಾರಂಭ ಮಾಡಿ. ಇಂದು ಕಾರ್ಯ ಕ್ಷೇತ್ರದಲ್ಲಿ ಮಿತ್ರರ ಸಹಾಯ, ಓರ್ವ ಮಿತ್ರರು ನಿಮ್ಮನ್ನು ಕಾಣಲು ಬರುತ್ತಾರೆ, ಅಷ್ಟೇ ಅಲ್ಲ ತಾಯಿ ನಿಮ್ಮ ಸಹಾಯಕ್ಕೆ ಬರುತ್ತಾರೆ. ಸ್ತ್ರೀಯರ ಭೇಟಿ. ವಾಹನ ಅನುಕೂಲ.

ದೋಷ ಪರಿಹಾರ :  ತಿಲ ದಾನ ಮಾಡಿ
  
ಮೀನ : ನಿಮ್ಮ ದಿನ ಪ್ರಾರಂಭವಾಗುವ ಮುನ್ನ ನಿಮ್ಮ ತಂದೆ-ತಾಯಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಹೋದರಿ ನಿಮ್ಮ ಕಾರ್ಯಕ್ಕೆ ಅನುಕೂಲ ಮಾಡುತ್ತಾರೆ. ದಾಂಪತ್ಯದಲ್ಲಿ ಸ್ವಲ್ಪ ಹೊಂದಾಣಿಕೆ ಕಡಿಮೆಯಾಗಲಿದೆ. ಮಾತು ಕಡಿಮೆ ಮಾಡಿ.
  
ದೋಷ ಪರಿಹಾರ : ಸಪ್ತಶತಿ ಪುಸ್ತಕವನ್ನು ಪಾರಾಯಣ ಮಾಡುವ ಆಸಕ್ತರಿಗೆ ದಾನ ಮಾಡಿ


ವಾಞ್ಮಯೀ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ, ಯಾರಿಗೆ ಟಿಕೆಟ್?
North Korea Election: ಶೇ. 99.99% ಮತದಾನ, ಕಿಮ್‌ಗೆ ಭರ್ಜರಿ ಗೆಲುವು! ಆದ್ರೆ, ಇತಿಹಾಸದಲ್ಲೇ ಮೊದಲ ಬಾರಿಗೆ ವಿರೋಧ ಮತ ಚಲಾಯಿಸಿದ ಜನ!