ಮುರಿದ ಘಟಬಂಧನ್: ದೇಶಕ್ಕೆ ಕೇಳಿಸಿದ ಬುವಾ-ಭತಿಜಾ ಆಕ್ರಂದನ್!

Published : Jun 04, 2019, 02:46 PM IST
ಮುರಿದ ಘಟಬಂಧನ್: ದೇಶಕ್ಕೆ ಕೇಳಿಸಿದ ಬುವಾ-ಭತಿಜಾ ಆಕ್ರಂದನ್!

ಸಾರಾಂಶ

ಉತ್ತರಪ್ರದೇಶದಲ್ಲಿ ಮುರಿದು ಬಿತ್ತು ಎಸ್‌ಪಿ-ಬಿಎಸ್‌ಪಿ ಘಟಬಂಧನ್| ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಎಸ್‌ಪಿ-ಬಿಎಸ್‌ಪಿ| ಎಸ್‌ಪಿ ಜೊತೆಗಿನ ಮೈತ್ರಿ ಪಕ್ಷದ ತಪ್ಪು ನಿರ್ಧಾರ ಎಂದ ಮಾಯಾವತಿ| ಮೈತ್ರಿ ಕಡಿತ ತಾತ್ಕಾಲಿಕ ಎಂದ ಬಿಎಸ್‌ಪಿ ಮುಖ್ಯಸ್ಥೆ| ಬಿಎಸ್‌ಪಿಗೆ ಮೈತ್ರಿ ಬೇಡವಾದರೆ ಪರವಾಗಿಲ್ಲ ಎಂದ ಅಖಿಲೇಶ್| 11 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧಾರ|

ಲಕ್ನೋ(ಜೂ.04): ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಸೆಣೆಸಿದ್ದ ಎಸ್‌ಪಿ-ಬಿಎಸ್‌ಪಿ, ಘಟಬಂಧನ್ ಮುರಿದುಕೊಂಡಿವೆ. 

ಈ ಕುರಿತು ಖುದ್ದು ಮಾಹಿತಿ ನೀಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

ಎಸ್‌ಪಿ ಜೊತೆಗಿನ ಮೈತ್ರಿ ಪಕ್ಷದ ತಪ್ಪು ನಿರ್ಧಾರ ಎಂದಿರುವ ಮಾಯಾವತಿ, ಘಟಬಂಧನ್‌ನಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಮೈತ್ರಿ ಕಡಿತ ತಾತ್ಕಾಲಿಕ ಎಂದಿರುವ ಮಾಯಾವತಿ, ಭವಿಷ್ಯದಲ್ಲಿ ಮತ್ತೆ ಎಸ್‌ಪಿ ಜೊತೆ ಮೈತ್ರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಘಟಬಂಧನ್ ಮುರಿದು ಬಿದ್ದ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್‌ಪಿಗೆ ಮೈತ್ರಿ ಬೇಡವಾದರೆ ಪರವಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಿ ಜಯಗಳಿಸಲಿದೆ ಎಂದಿರುವ ಅಖಿಲೇಶ್, ಗಟಬಂಧನ್ ಮುರಿದು ಬಿದ್ದಿರುವುದರಿಂದ ಯಾವುದೇ ಪರಿಣಾಮ ಆಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್