ಬಿಜೆಪಿ ಮಣಿಸಲು ಸೋನಿಯಾ ಔತಣಕೂಟ

By Suvarnanews Web DeskFirst Published Mar 14, 2018, 7:59 AM IST
Highlights

2014 ರ ಲೋಕಸಭಾ ಚುನಾವಣೆಯ ಹೀನಾಯ ಸೋಲು ಮತ್ತು ನಂತರದ ದಿನಗಳಲ್ಲಿ ವಿವಿಧ  ರಾಜ್ಯಗಳಲ್ಲಿನ ಸತತ ಸೋಲಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ  ಸೋನಿಯಾ ಗಾಂಧಿ, ಮಂಗಳವಾರ ಇಲ್ಲಿ 20  ವಿಪಕ್ಷಗಳ ನಾಯಕರಿಗೆ ಔತಣ ಕೂಟವೊಂದನ್ನು ಆಯೋಜಿಸಿದ್ದರು.

ನವದೆಹಲಿ (ಮಾ. 14): 2014 ರ ಲೋಕಸಭಾ ಚುನಾವಣೆಯ ಹೀನಾಯ ಸೋಲು ಮತ್ತು ನಂತರದ ದಿನಗಳಲ್ಲಿ ವಿವಿಧ  ರಾಜ್ಯಗಳಲ್ಲಿನ ಸತತ ಸೋಲಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ  ಸೋನಿಯಾ ಗಾಂಧಿ, ಮಂಗಳವಾರ ಇಲ್ಲಿ 20  ವಿಪಕ್ಷಗಳ ನಾಯಕರಿಗೆ ಔತಣ ಕೂಟವೊಂದನ್ನು ಆಯೋಜಿಸಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸವಾಲು ಹಾಕುವ  ನಿಟ್ಟಿನಲ್ಲಿ ಹೊಸ ರಾಜಕೀಯ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಈ ಔತಣಕೂಟ  ಆಯೋಜಿಸಲಾಗಿತ್ತು. ಎನ್ನಲಾಗಿದೆ.
ಸೋನಿಯಾರ ನಿವಾಸ ಜನಪಥ ೧೦ರಲ್ಲಿ ನಡೆದ ಈ  ಔತಣ ಕೂಟದಲ್ಲಿ ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ,  ಜೆಡಿಎಸ್, ಬಿಎಸ್ಪಿ, ಟಿಎಂಸಿ, ಡಿಎಂಕೆ ಮತ್ತು ಎಡಪಕ್ಷಗಳ  ನಾಯಕರು ಭಾಗಿಯಾಗಿದ್ದರು. ಮುಖ್ಯವಾಗಿ ಎನ್ ಸಿಪಿಯ ಶರದ್ ಪವಾರ್, ಡಿಎಂಕೆಯ ಕನಿಮೋಳಿ, ಎಸ್‌ಪಿಯ ರಾಂಗೋಪಾಲ್ ಯಾದವ್, ಬಿಎಸ್ಪಿ ಸತೀಶ್ ಚಂದ್ರ, ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ, ಜೆಡಿಯು ಬಂಡಾಯ ಬಣದ ಶರದ್ ಯಾದವ್, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಹಾಜರಿದ್ದರು.

click me!