ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ಮಗನಿಗೆ ಹಕ್ಕಿಲ್ಲ : ದೆಹಲಿ ನ್ಯಾಯಾಲಯ

By Suvarna web DeskFirst Published Nov 29, 2016, 1:45 PM IST
Highlights

ತಂದೆ ತಾಯಿಯ ಸ್ವಂತ ಮನೆಯಲ್ಲಿ ಮಗನಿಗೆ ವಾಸಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ತಂದೆ ತಾಯಿ  ಇಚ್ಚಿಸಿದರೆ ಮಾತ್ರ ಅವರೊಂದಿಗೆ ವಾಸಿಸಬಹುದು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.

ನವದೆಹಲಿ (ನ.29): ತಂದೆ ತಾಯಿಯ ಸ್ವಂತ ಮನೆಯಲ್ಲಿ ಮಗನಿಗೆ ವಾಸಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ತಂದೆ ತಾಯಿ  ಇಚ್ಚಿಸಿದರೆ ಮಾತ್ರ ಅವರೊಂದಿಗೆ ವಾಸಿಸಬಹುದು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.

ತಂದೆ-ಮಗನ ಸಂಬಂಧ ಸೌಹಾರ್ದಯುತವಾಗಿರುವವರೆಗೆ ಪೋಷಕರು ತಮ್ಮೊಟ್ಟಿಗೆ ಮಗನಿರುವುದಕ್ಕೆ ಅವಕಾಶ ನೀಡಬಹುದು. ಜೀವನ ಪರ್ಯಂತ ಮಗನ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲವೆಂದು ನ್ಯಾಯಾಲಯ ಹೇಳಿದೆ.

ಮಗ ವಿವಾಹಿತನಿರಲಿ, ಅವಿವಾಹಿತನಿರಲಿ ತಂದೆ ತಾಯಿ ಅವಕಾಶ ನೀಡುವವರೆಗೆ ಮಾತ್ರ ಅವರ ಮೆನಯಲ್ಲಿ ವಾಸಿಸಬಹುದು. ಈ ವಿಚಾರದಲ್ಲಿ ಮಗನಿಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲವೆಂದು ನ್ಯಾ. ಪ್ರತಿಭಾ ರಾಣಿ ಆದೇಶಿಸಿದ್ದಾರೆ.

click me!