ಇಲ್ಲಿ ಜ್ಯೂಸ್‌ ಕುದಿಸಿ ಕುಡೀಬೇಕು, ಮೊಟ್ಟೆ ಸುತ್ತಿಗೇಲಿ ಒಡಿಯಬೇಕು!: ವಿಡಿಯೋ ವೈರಲ್

By Web DeskFirst Published Jun 9, 2019, 8:19 AM IST
Highlights

ಇಲ್ಲಿ ಜ್ಯೂಸ್‌ ಕುದಿಸಿ ಕುಡೀಬೇಕು, ಮೊಟ್ಟೆ ಸುತ್ತಿಗೇಲಿ ಒಡಿಯಬೇಕು!| ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನ ಪರಿಸ್ಥಿತಿ| ಸಿಯಾಚಿನ್‌ನಲ್ಲಿ ಭಾರತೀಯ ಯೋಧರ ವಿಡಿಯೋ ವೈರಲ್‌

ನವದೆಹಲಿ[ಜೂ.09]: ಯಾವುದೇ ಹವಾಮಾನ ವೈಪರೀತ್ಯವನ್ನೂ ಬದಿಗೊತ್ತಿ ಯೋಧರು ಗಡಿ ಕಾಯುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಎನ್ನಿಸಿಕೊಂಡಿರುವ ಸಿಯಾಚಿನ್‌ನಲ್ಲಿ ಯೋಧರು ಎಂಥ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದರ ಕುರಿತು ಮೂವರು ಭಾರತೀಯ ಯೋಧರು ಮಾಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗಿದೆ.

ಉಷ್ಣಾಂಶ 20 ಡಿ.ಸೆ.ತಲುಪಿದರೇ ನಮ್ಮ ಮೈಯಲ್ಲಿ ನಡುವ ಆರಂಭವಾಗುತ್ತದೆ. ಆದರೆ ಸಮುದ್ರಮಟ್ಟದಿಂದ 5000 ಮಿಟರ್‌ ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ ಉಷ್ಣತೆ ಮೈನಸ್‌ 40 ಡಿ.ಸೆ.ನಿಂದ ಮೈನಸ್‌ 70 ಡಿ.ಸೆ.ಯವರೆಗೂ ತಲುಪುತ್ತದೆ. ಇಲ್ಲಿ ನಿತ್ಯದ ಜೀವನ ಹೇಗಿರುತ್ತದೆ ಎಂಬುದನ್ನು ಯೋಧರು ವಿಡಿಯೋ ಮೂಲಕ ತೋರಿಸಿದ್ದಾರೆ. ಮೊದಲಿಗೆ ಯೋಧನೊಬ್ಬ, ಕುಡಿಯಲೆಂದು ನೀಡಲಾದ ಜ್ಯೂಸ್‌ ಅನ್ನು ಟೆಟ್ರಾ ಪ್ಯಾಕ್‌ನಿಂದ ತೆಗೆದರೆ ಅದು ದ್ರವ ರೂಪದಲ್ಲಿ ಬರುವುದಿಲ್ಲ. ಬದಲಾಗಿ ಘನ ರೂಪದಲ್ಲಿ ಬರುತ್ತದೆ. ಅದನ್ನು ಮತ್ತೆ ಬಿಸಿ ಮಾಡಿ ಕುಡಿಯುವುದನ್ನು ತೋರಿಸುತ್ತಾನೆ.

ಇನ್ನು ಕೈಯಲ್ಲಿ ಸ್ವಲ್ಪ ಜೋರಾಗಿ ಗುದ್ದಿದರೂ ಒಡೆಯುವ ಕೋಳಿ ಮೊಟ್ಟೆಯನ್ನು ನೆಲಕ್ಕೆ ಎಸೆದರೂ ಅದು ಒಡೆಯಲ್ಲ. ಬಳಿಕ ಯೋಧರು ಹ್ಯಾಮರ್‌ ಬಳಸಿ ಮೊಟ್ಟೆಒಡೆಯುತ್ತಾರೆ. ಬಳಿಕ ತರಕಾರಿಯನ್ನೂ ಯೋಧರು ಸುತ್ತಿಗೆಯಲ್ಲೇ ಬಡಿದು ಪುಡಿ ಮಾಡುವ ದೃಶ್ಯಗಳು ಯೋಧರ ನಿತ್ಯದ ಗೋಳನ್ನು ವಿವರಿಸುತ್ತಿವೆ.

click me!