
ಕನ್ನಡ
ಚಲನಚಿತ್ರವೊಂದರ ಹಣಕಾಸು ವಿಚಾರವಾಗಿ ಆ ಚಿತ್ರದ ನಿರ್ಮಾಪಕ ಹಾಗೂ ಸಹ ನಿರ್ಮಾಪಕನ ನಡುವಿನ ಕಾದಾಟದಲ್ಲಿ ಸಾಫ್ಟ್‌ವೇರ್ ಕಂಪನಿ ನೌಕರರೊಬ್ಬರು ಬಲಿಯಾಗಿದ್ದಾರೆ.ಇತ್ತೀಚಿಗೆ
ತೆರೆಕಂಡ ‘ಡೇಂಜರ್ ಝೋನ್' ಚಲನ ಚಿತ್ರಕ್ಕೆ ಸಂಬಂಧಿಸಿದಂತೆ ಘರ್ಷಣೆಯಾಗಿದ್ದು, ಸಾಫ್ಟ್ ವೇರ್ ಕಂಪನಿ ನೌಕರ ಮನೋಜ್ ಮ್ಯಾಥ್ಯು (32) ಹತ್ಯೆಗೀಡಾಗಿದ್ದಾರೆ.ಮಹಾಲಕ್ಷ್ಮಿ
ಲೇಔಟ್‌ನ ಎಪಿಎಂಸಿ ಯಾರ್ಡ್ನಲ್ಲಿ ಗುರುವಾರ ತಡರಾತ್ರಿ ನಿರ್ಮಾಪಕ ಸ್ವರೂಪ್ಗೌಡ ಹಾಗೂ ಸಹ ನಿರ್ಮಾಪಕ ರಾಮು ತಂಡದ ನಡುವೆ ನಡೆದ ಗಲಾಟೆಯಲ್ಲಿ ಮಾಥ್ಯು ಹತ್ಯೆಯಾಗಿದೆ. ಗಲಾಟೆ ಯಲ್ಲಿ ಗಾಯಗೊಂಡಿರುವ ಸ್ವರೂಪ್ಗೌಡ, ಗೋಪಿ ಹಾಗೂ ಕಮಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದು, ಅವರು ಪ್ರಾಣಾಪಾಯದಿಂದ ಸುರಕ್ಷಿತವಾಗಿ ದ್ದಾರೆ. ಈ ಹತ್ಯೆ ಬಳಿಕ ತಲೆಮರೆಸಿಕೊಂಡಿರುವ ಸಹ ನಿರ್ಮಾಪಕ ರಾಮು ಮತ್ತು ಆತನ ನಾಲ್ವರು ಸಹಚರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ರಿಯಲ್
ಎಸ್ಟೇಟ್ ವ್ಯವಹಾರ ನಡೆಸುವ ಸ್ವರೂಪ್, ಕಳೆದ ವರ್ಷ ‘ಡೇಂಜರ್ ಝೋನ್' ಎಂಬ ಕನ್ನಡ ಚಲನಚಿತ್ರ ನಿರ್ಮಿಸಿದ್ದರು. ಈ ಚಿತ್ರಕ್ಕೆ ಅವರ ಗೆಳೆಯ ರಾಮು ಸಹ ಹಣ ಹೂಡಿದ್ದರು. ಆದರೆ, ಚಿತ್ರ ತೆರೆಕಂಡಷ್ಟೆ ವೇಗವಾಗಿ ಚಿತ್ರಮಂದಿರಗಳಿಂದ ಎತ್ತಂಗಡಿ'ಯಾಗಿತ್ತು. ಸಿನಿಮಾದ ಸೋಲಿನಿಂದ ಬೇಸರಗೊಂಡ ರಾಮು, ತಾನು ಹೂಡಿದ್ದ ಹಣ ಮರಳಿಸುವಂತೆ ನಿರ್ಮಾಪಕನನನ್ನು ಆಗ್ರಹಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಸ್ವರೂಪ, ಯಾವುದೇ ಕಾರಣಕ್ಕೂ ಬಿಡಿಗಾಸು ಸಹ ಹಿಂದಿ ರುಗಿಸುವುದಿಲ್ಲ ಎಂದಿದ್ದರು. ಈ ಹಣಕಾಸು ವಿಷಯ ವಾಗಿ ಹಲವು ಬಾರಿ ಅವರ ನಡುವೆ ಗಲಾಟೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪಾರ್ಟಿಗೆ
ವಿಲನ್ ಎಂಟ್ರಿ: ಸ್ವರೂಪ್, ತನ್ನ ಗೆಳೆಯರಾದ ಮನೋಜ್, ಗೋಪಿ ಹಾಗೂ ಕಮಲ್ ಜತೆ ರಾತ್ರಿ ಎಪಿಎಂಸಿ ಯಾರ್ಡ್ ಬಳಿ ಪಾರ್ಟಿ ಮಾಡುತ್ತಿದ್ದರು. ಈ ವಿಚಾರ ತಿಳಿದ ರಾಮು, ಅಲ್ಲಿಗೆ 12 ಗಂಟೆ ಸುಮಾರಿಗೆ ತನ್ನ ಸಹಚರರ ಜತೆ ತೆರಳಿದ್ದ. ಈ ವೇಳೆ ಎರಡು ಗುಂಪುಗಳ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಕೆರಳಿದ ರಾಮು ಹಾಗೂ ಆತನ ಸಹಚರರು, ಮಾರಕಾಸ್ತ್ರಗಳಿಂದ ದಾಳಿಗಿಳಿದಿದ್ದಾರೆ. ಆ ವೇಳೆ ಮನೋಜ್ಗೆ ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದ ಆರೋಪಿಗಳು, ಸ್ವರೂಪ್ ಹಾಗೂ ಆತನ ಇಬ್ಬರು ಗೆಳೆಯರ ಮೇಲೂ ಮಚ್ಚು-ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ
ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು, ಗಾಯಾಳುಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಮ್ಯಾಥ್ಯು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮ್ಯಾಥ್ಯುಅವರು, ಮೊದಲು ಸ್ವರೂಪ್ ಅವರ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ವೈಬ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ್ದರು. ಈ ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.