
ಲಾಗೋಸ್[ಜು.27]: ನೈಜೀರಿಯಾದ ಸಂಸತ್ತಿನ ಕಲಾಪ ನಡೆಯುವ ಕೊಠಡಿಗೆ ಹಾವೊಂದು ಬಂದಿದ್ದರಿಂದ ಸಂಸದರು ಆತಂಕದಿಂದ ಹೊರಗೆ ಓಡಿದ ಘಟನೆ ನಡೆದಿದೆ.
ನಾವು ಇನ್ನೇನು ಸಂಸತ್ ಭವನ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ದೊಡ್ಡ ಹಾವೊಂದು ಕೊಠಡಿಯಲ್ಲಿ ಓಡಾಡುತ್ತಿತ್ತು. ಹೀಗಾಗಿ ಹೊರಗೆ ಓಡಿ ಬಂದೆವು ಎಂದು ಸಂಸತ್ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಕೊಠಡಿಯ ಚಾವಣಿಯಲ್ಲಿ ಸೇರಿಕೊಂಡಿದ್ದ ಹಾವು ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಹಾವು ಯಾರಿಗೂ ಕಚ್ಚಲ್ಲ. ಬಳಿಕ ಸಂಸದರು ಹಾವನ್ನು ಹೊಡೆದು ಹತ್ಯೆ ಮಾಡಿದ್ದಾರೆ. ಹಣದ ಕೊರತೆಯಿಂದಾಗಿ ಸಂಸತ್ ಭವನ ನಿರ್ವಹಣೆ ಮಾಡದೇ ಇದ್ದಿದ್ದೇ ಈ ಘಟನೆಗೆ ಕಾರಣ ಎಂದು ಸಂಸದರು ಆರೋಪಿಸಿದ್ದಾರೆ. ಅಲ್ಲದೇ ಸುರಕ್ಷಿತ ಕ್ರಮಗಳನ್ನು ಕೈಗೊಳುವವರೆಗೂ ಸಂಸತ್ತಿಗೆ ಆಗಮಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಸತ್ ಕಲಾಪವನ್ನು ಅನಿರ್ದಿಷ್ಟಅವಧಿಗೆ ಮೂಂದೂಡಲಾಗಿದೆ.
ಸಂಸತ್ತಿನ ಸುತ್ತಮುತ್ತ ಹೆಗ್ಗಣ, ಹಾವು ಓಡಾಡುವುದನ್ನು ಸಂಸದರು ಕಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಸಂಸತ್ತಿನೊಳಗೆ ಬಂದಿದ್ದರಿಂದ ಅವರೆಲ್ಲಾ ಹೌಹಾರಿದ್ದಾರೆ.
ನೈಜೀರಿಯಾದಲ್ಲಿ ಮಂಡಲದ ಹಾವು, ನಾಗರಹಾವು ಸೇರಿದಂತೆ ಹಲವಾರು ವಿಷಕಾರಿ ಹಾವುಗಳಿವೆ. 1 ಲಕ್ಷ ಜನರಲ್ಲಿ 500 ಜನರು ಪ್ರತಿವರ್ಷ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ. 8ರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.