ಮೋದಿ ಸಚಿವ ಸಂಪುಟದ ಕಿರಿಯ, ಹಿರಿಯ ಸಚಿವರು?

By Web DeskFirst Published May 31, 2019, 12:48 PM IST
Highlights

ಲೋಕ ಸಮರದಲ್ಲಿ ಗೆದ್ದು ಬೀಗಿದ ಬಿಜೆಪಿ| ಗೆಲುವಿನ ಬೆನ್ನಲ್ಲೇ ಸಜ್ಜಾಯ್ತು ಮೋದಿ ಟೀಂ| ಸರ್ಕಾರ ನಡೆಸಲು ಮೋದಿ ಸರ್ಕಾರದಲ್ಲಿ 57 ಮಂದಿ ಸಚಿವರಿಗೆ ಸ್ಥಾನ| ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಕಿರಿಯ ಹಾಗೂ ಹಿರಿಯ ಸಚಿವರು ಯಾರು?

ನವದೆಹಲಿ[ಮೇ.31]: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಸೇರಿದಂತೆ ಒಟ್ಟು 58 ಮಂದಿ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ಈ ಮೂಲಕ ಎರಡನೇ ಅವಧಿಯ ಸರ್ಕಾರ ರಚನೆಗೆ ಮೋದಿ ಟೀಂ ಸಜ್ಜಾಗಿದೆ. ಹೀಗಿರುವಾಗ ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಅತ್ಯಂತ ಹಿರಿಯ ಹಾಗೂ ಕಿರಿಯ ಸಚಿವರು ಯಾರು ಎಂಬುವುದು ಭಾರೀ ಕುತೂಹಲ ಮೂಡಿಸಿದೆ.

Smt takes oath as Union Minister. pic.twitter.com/NBoDH6Gj7t

— BJP (@BJP4India)

ಗುರುವಾರ ಕೇಂದ್ರ ಸಂಪುಟ ಸೇರಿದವರ ಪೈಕಿ ಕ್ಯಾಬಿನೆಟ್‌ ಸಚಿವರಲ್ಲಿ ಸ್ಮೃತಿ ಇರಾನಿ(43) ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಇನ್ನು ಎಲ್‌ಜೆಪಿ ನಾಯಕ ರಾಮ್‌ ವಿಲಾಸ್‌ ಪಾಸ್ವಾನ್‌ (73) ಅತ್ಯಂತ ಹಿರಿಯ ಸಚಿವರಾಗಿದ್ದಾರೆ.

राष्ट्रपति भवन में कैबिनेट मंत्री के तौर पर पद एवं गोपनीयता की शपथ ली। pic.twitter.com/ooxhZduJnn

— Ram Vilas Paswan (@irvpaswan)

ಮೋದಿ ಸಂಪುಟದ ಸಚಿವರ ಸರಾಸರಿ ವಯಸ್ಸು 65 ವರ್ಷ.

click me!