ವಾರಕ್ಕೆ 6 ದಿನ 6 ಬಾರಿ ಸೆಕ್ಸ್‌: ಸಿಬ್ಬಂದಿಗೆ ಜಾಕ್‌ ಮಾ ಕರೆ!

By Web Desk  |  First Published May 15, 2019, 8:22 AM IST

ವಾರಕ್ಕೆ 6 ದಿನ 6 ಬಾರಿ ಸೆಕ್ಸ್‌: ಸಿಬ್ಬಂದಿಗೆ ಜಾಕ್‌ ಮಾ ಕರೆ!| ಕಚೇರಿಯಲ್ಲಿ 996, ಮನೆಯಲ್ಲಿ 669 ನೀತಿ ಪಾಲಿಸಿ


ಬೀಜಿಂಗ್‌[ಮೇ.15]: ಯಾರು ವಾರದ ಆರೂ ದಿನ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡಲು ಉತ್ಸುಕತೆ ಹೊಂದಿದ್ದೀರೋ ಅವರು ಮಾತ್ರವೇ ನಮ್ಮ ಕಂಪನಿಯಲ್ಲಿ ಕೆಲಸ ಕೇಳಿಕೊಂಡು ಬನ್ನಿ ಎಂದು ಇತ್ತೀಚೆಗಷ್ಟೇ ಸಲಹೆ ನೀಡಿದ್ದ ಚೀನಾದ ಅಲಿಬಾಬಾ ಕಂಪನಿ ಮುಖ್ಯಸ್ಥ ಜಾಕ್‌ ಮಾ, ಇದೀಗ ತಮ್ಮ ಸಿಬ್ಬಂದಿಗೆ ವಾರಕ್ಕೆ 6 ದಿನವೂ ಸೆಕ್ಸ್‌ ಮಾಡಿ ಎಂದು ಸಲಹೆ ನೀಡಿದ್ದಾರೆ.

ಕಂಪನಿಯ ಸಿಬ್ಬಂದಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾಕ್‌ ಮಾ, ಜೀವನದ ಗುಣಮಟ್ಟಸುಧಾರಿಸಲು ಕಚೇರಿಗಳಲ್ಲಿ ವಾರಕ್ಕೆ ಆರೂ ದಿನ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡಬೇಕು. ಅದೇ ರೀತಿ ಮನೆಯಲ್ಲಿ ವಾರಕ್ಕೆ ಆರೂ ದಿನ 6 ಬಾರಿ ಲೈಂಗಿಕ ಚಟುವಟಿಕೆ ನಡೆಸಬೇಕು ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ. ಈ ಮೂಲಕ ಕಚೇರಿಯಲ್ಲಿ 996 ನೀತಿ ಮತ್ತು ಮನೆಯಲ್ಲಿ 669 ನೀತಿ ಪಾಲಿಸಿ ಎಂದು ಹೇಳಿದ್ದಾರೆ. ಜಾಕ್‌ರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಅಷ್ಟುಮಾತ್ರವಲ್ಲ ಅವರ ಹೇಳಿಕೆ ಕುರಿತು ವ್ಯಂಗ್ಯ, ಟೀಕೆ ಕೂಡಾ ವ್ಯಕ್ತವಾಗಿದೆ.

Tap to resize

Latest Videos

ಪ್ರತಿ ವರ್ಷ ಮೇ 10ರಂದು ಅಲಿಬಾಬಾ ಕಂಪನಿಯ ಸಿಬ್ಬಂದಿಯ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಂಪನಿಯ ಮುಖ್ಯ ಕಚೇರಿಯಲ್ಲಿ ಆಚರಿಸಲಾಗುತ್ತದೆ. ಆ ದಿನವನ್ನು ಅಲಿ ಡೇ ಎಂದು ಕರೆಯಲಾಗುತ್ತದೆ.

click me!