ಆರ್ಯ, ಕ್ಷತ್ರೀಯ, ವೈಶ್ಯ, ಶೂದ್ರ ಹೀಗೆ ಜನರನ್ನ ವಿಂಗಡಿಸಿದ್ದು ಯಾರು ? ಮಹಮ್ಮದ್ ಪೈಗಂಬರಾ ? ಏಸು ಕ್ರಿಸ್ತನಾ ?

By Suvaran Web DeskFirst Published Jan 31, 2018, 3:18 PM IST
Highlights

ಶೀರ್ ಕೊಲೆಯಾಗಿದ್ದು ಒಳ್ಳೆಯದು ಅಂತಾರೆ, ದೀಪಕ್ ರಾವ್ ಕೊಲೆಯಾಗಿದ್ದನ್ನು ಖಂಡಿಸುತ್ತಾರೆ. ಸಮಾಜವನ್ನ ಒಡೆಯುವ ಕೆಲಸವನ್ನು ಹಿಂದಿನಿಂದಲೂ ಮಾಡಿದ್ದಾರೆ

ಬೆಂಗಳೂರು(ಜ.31): ಆರ್ಯ, ಕ್ಷತ್ರೀಯ, ವೈಶ್ಯ, ಶೂದ್ರ ಹೀಗೆ ಜನರನ್ನ ವಿಂಗಡಿಸಿದ್ದು ಯಾರು ? ಮಹಮ್ಮದ್ ಪೈಗಂಬರಾ ? ಏಸು ಕ್ರಿಸ್ತನಾ ? ಅಲ್ಲ ಇವರುಗಳೇ ಸಮಾಜವನ್ನ ಒಡೆದವರು' ಎಂದು ಬಿಜೆಪಿಯ ಹಿಂದುತ್ವದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿ ಸಭೆಯಲ್ಲಿ  ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಹಿಂದುತ್ವದ ಬಗ್ಗೆ ಹುಷಾರಾಗಿರಿ ಅವರ ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ. ಬಶೀರ್ ಕೊಲೆಯಾಗಿದ್ದು ಒಳ್ಳೆಯದು ಅಂತಾರೆ, ದೀಪಕ್ ರಾವ್ ಕೊಲೆಯಾಗಿದ್ದನ್ನು ಖಂಡಿಸುತ್ತಾರೆ. ಸಮಾಜವನ್ನ ಒಡೆಯುವ ಕೆಲಸವನ್ನು ಹಿಂದಿನಿಂದಲೂ ಮಾಡಿದ್ದಾರೆ. ಈಗಲೂ ಮುಂದುವರೆಸಿದ್ದಾರೆ.ಇಂತವರ ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ' ಎಂದು ಬಿಜೆಪಿಯ ನೀತಿಯನ್ನು ಖಂಡಿಸಿದರು.

ಜೋರಾಗಿ ಮಾತನಾಡಿ

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಪಕ್ಷ ಸಂಘಟಿಸಿ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಜನರ ಹಾದಿ ತಪ್ಪಿಸುವ ಸಾಧ್ಯತೆಯಿದೆ. ಸಮಾಜದ ತಳ ಸಮುದಾಯದಿಂದ ಎಲ್ಲರನ್ನೂ ಒಂದೇ ಎನ್ನುತ್ತಾ ಬಂದವರು ನಾವು. ನಿಮ್ಮ ಸಾಫ್ಟ್ ಭಾಷಣಕ್ಕೆ ಕಡಿವಾಣ ಹಾಕಿ. ಪ್ರತಾಪ ಸಿಂಹ, ಶೋಭಾಕರಂದ್ಲಾಜೆ, ಅನಂತಕುಮಾರ್ ಹೆಗಡೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ನಮ್ಮಲ್ಲಿ ಕೌಂಟರ್ ಕೊಡಲ್ಲ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿ ಹಿಂದುತ್ವ ವಿಚಾರಗಳನ್ನ ಪ್ರಚಾರ ಮಾಡುತ್ತಿದ್ದಾರೆ. ನೀವು ಯಾಕೆ ಬಾಯಿ ಬಿಚ್ಚಲ್ಲ. ಐದು ವರ್ಷ ಅಧಿಕಾರದಲ್ಲಿ ಬರೀ ಜಗಳ, ಗಣಿ ಹಗರಣ ಡಿನೋಟಿಫಿಕೇಷನ್ ಇದೇ ಮಾಡಿಕೊಂಡು ಕಾಲಕಳೆದರು. .ಈಗ ನಮ್ಮ ವಿರುದ್ಧ ಬರೀ ಆರೋಪಗಳು ಮಾಡುತ್ತಿದ್ದಾರೆ. ಎಷ್ಟು ಜನ ಜಿಲ್ಲೆಗಳಲ್ಲಿ ಮಾತನಾಡಿದ್ದೀರಿ. ಯಾಕೆ ಭಯನಾ ?  ಮೋದಿ ಏನ್ ಮಾಡಿದರು ಅನ್ನೋದನ್ನ ಹೇಳಕ್ಕೆ ಆಗಲ್ವಾ ? ಎಂದು ನಾಯಕರನ್ನು ತರಾಟೆಗೆ ತೆಗೆದುಕೊಂಡರು.

click me!