ನನ್ನ ಗುಂಡಿಟ್ಟು ಕೊಂದುಬಿಡಿ; ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ

Published : Jun 07, 2019, 10:42 AM IST
ನನ್ನ ಗುಂಡಿಟ್ಟು ಕೊಂದುಬಿಡಿ; ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ

ಸಾರಾಂಶ

ನನ್ನ ಗುಂಡಿಟ್ಟು ಕೊಂದುಬಿಡಿ| ತುಂಬಿದ ಸಭೆಯಲ್ಲಿ ಹರ್ಯಾಣ ಕಾಂಗ್ರೆಸ್‌ ಅಧ್ಯಕ್ಷ ಕೂಗಾಟ| ಲೋಕ ಚುನಾವಣೆಯಲ್ಲಿ ಸೋಲಿಗೆ ಹೊಣೆ ಮಾಡಿದ್ದಕ್ಕೆ ಆಕ್ರೋಶ

ಚಂಡೀಗಢ[ಜೂ.07]: ಹರ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷದ ಹೀನಾಯ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ನಡೆಸಲು ಕರೆಯಲಾಗಿದ್ದ ಸಭೆಯ ವೇಳೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ತನ್ವರ್‌ ಕೂಗಾಡಿ ರಾದ್ಧಾಂತ ಮಾಡಿದ್ದಾರೆ. ಪಕ್ಷದ ಇತರ ಮುಖಂಡರು ಸೋಲಿನ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಕೇಳಿದಾಗ ‘ನೀವು ನನ್ನನ್ನು ಮುಗಿಸಬೇಕು ಎಂದು ಬಯಸಿದರೆ, ಗುಂಡಿಟ್ಟು ಸಾಯಿಸಿಬಿಡಿ’ ಎಂದು ಕಿರುಚಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಬಾರಿ 10ರಲ್ಲಿ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಿಲ್ಲ. ಹೀಗಾಗಿ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್‌ ಹೂಡಾ, ಪಕ್ಷದ ಕಳಪೆ ಪ್ರದರ್ಶನಕ್ಕೆ ವಿವರಣೆ ನೀಡುವಂತೆ ತನ್ವರ್‌ ಅವರನ್ನು ಕೇಳಿದ್ದರು.

ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬಂದರೂ ತನ್ವರ್‌ ಅದಕ್ಕೆ ಮಣಿದಿರಲಿಲ್ಲ. ಪಕ್ಷದ ಸೋಲಿನ ಪರಾಮರ್ಶೆಯ ಬಗ್ಗೆ ಕರೆಯಲಾಗಿದ್ದ ಸಭೆಯ ವೇಳೆ ಹರ್ಯಾಣ ಕಾಂಗ್ರೆಸ್‌ ಉಸ್ತುವಾರಿ ಗುಲಾಮ್‌ ನಬಿ ಆಜಾದ್‌, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಘೋಷಿಸುತ್ತಿದ್ದಂತೆ ತನ್ವರ್‌ ಆಕ್ರೋಶ ಹೊರಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!