
ರೊಹ್ತಕ್ (ಜ.01): ಸಾರ್ವಜನಿಕ ಸಭೆಯೊಂದನ್ನುದ್ದೇಶಿ ಮಾತನಾಡುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಯುವಕನೋರ್ವ ಶೂ ಎಸೆದ ಘಟನೆ ನಡೆದಿದೆ.
ಆದರೆ ಎಸೆದ ಶೂ ಕೇಜ್ರಿವಾಲ್'ವರೆಗೆ ತಲುಪದೆ ವೇದಿಕೆ ಮೇಲೆ ಬಿದ್ದಿದೆ.
ಘಟನೆಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಶೂ ಎಸೆತಕ್ಕೆ ಪ್ರಧಾನಿ ನರೇಂಧ್ರ ಮೋದಿಯವರನ್ನು ಹೊಣೆಗಾರರನ್ನಾಗಿಸಿದ್ದಾರೆ.
ಮೋದಿ ಒಬ್ಬ ಹೇಡಿಯೆಂದು ನಾನು ಹೇಳಿದಕ್ಕೆ ಅವರ ಬೆಂಬಲಿಗರು ಇಂದು ನನ್ನ ಮೇಲೆ ಶೂ ಎಸೆದಿದ್ದಾರೆ. ಮೋದಿಜಿಯವರೇ, ನಾವು ಕೂಡಾ ಆ ರೀತಿ ಮಾಡಬಹುದು, ಆದರೆ ನಮ್ಮ ಸಂಸ್ಕಾರ ಅದಕ್ಕೆ ಅನುಮತಿಸುವುದಿಲ್ಲ. ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಸಿಬಿಐ ದಾಳಿ ಅಥವಾ ಶೂ ಎಸೆತದ ಹೊರತಾಗಿಯೂ ನಾನು ನೋಟು ಅಮಾನ್ಯ ಕ್ರಮ ಹಾಗೂ ಸಹಾರಾ-ಬಿರ್ಲಾ ಹಗರಣಗಳನ್ನು ಬಯಲಿಗೆಳೆಯುತ್ತೇನೆ, ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.