ಲೋಕಾ ಚುನಾವಣೆ : ಮಾಜಿ ಸಿಎಂ ಸಹೋದರ ಪ್ರತ್ಯೇಕ ಪಕ್ಷದಿಂದ ಸ್ಪರ್ಧೆ

By Web DeskFirst Published Jan 27, 2019, 4:06 PM IST
Highlights

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ, ಮಾಜಿ ಸಿಎಂ ಸಹೋದರ ತಮ್ಮದೇ ಸ್ವ ಪಕ್ಷ ಸ್ಥಾಪಿಸಿ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಲಕ್ನೋ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಅಲ್ಲದೇ ಗೆಲುವಿಗಾಗಿ ಕಸರತ್ತು ನಡೆಸಿವೆ. ಇದೇ ವೇಳೆ ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖಂಡ  ಹಾಗೂ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. 

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರಿಂದ ಸೈಡ್ ಲೈನ್ ಆಗಿದ್ದು, ಈ ನಿಟ್ಟಿನಲ್ಲಿ ಪಕ್ಷದಿಂದ ಹೊರ ಬಂದು ತಮ್ಮದೇ ಆದ ಪಕ್ಷ ಸ್ಥಾಪನೆ ಮಾಡಿಕೊಂಡು ರಾಜಕೀಯಕ್ಕೆ ಇಳಿದಿದ್ದರು.  

ಇದೀಗ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷ ಪ್ರಗತಿ ಶೀಲ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. 

ಈಗಾಗಲೇ ಸಮಾಜವಾದಿ ಪಕ್ಷವು ಮಾಯಾವತಿ ಅವರ BSP ಯೊಂದಿಗೆ ಮೈತ್ರಿ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ಘೋಷಿಸಿದೆ.

ಇದೇ ವೇಳೆ SP ಮುಖಂಡ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್  ಉತ್ತರ ಪ್ರದೇಶದ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ್ದು,  ಅಖಿಲೇಶ್ ಯಾದವ್ ಗಾಗಿ ತಾವು ರಾಜಕೀಯದಲ್ಲಿ  ಎಲ್ಲವನ್ನೂ ತ್ಯಾಗ ಮಾಡಿದ್ದು, ಕೊನೆಗೆ ತಮಗೆ ದ್ರೋಹ ಮಾಡಲಾಯಿತು ಎಂದರು.

ಅಲ್ಲದೇ ತಮ್ಮ ಕುಟುಂಬದವರ ವಿರುದ್ಧವೇ ಸಮರ ಸಾರಲು ಈ ಮೂಲಕ ಸಜ್ಜಾಗಿದ್ದಾರೆ.  

click me!