ಕಾಂಗ್ರೆಸ್ ಸಚಿವರ ಪತ್ನಿಗೆ ಲೋಕಸಭಾ ಟಿಕೆಟ್

Published : Jan 26, 2019, 07:58 PM ISTUpdated : Jan 26, 2019, 08:01 PM IST
ಕಾಂಗ್ರೆಸ್ ಸಚಿವರ ಪತ್ನಿಗೆ ಲೋಕಸಭಾ ಟಿಕೆಟ್

ಸಾರಾಂಶ

ಕಾಂಗ್ರೆಸ್ ಸಚಿವರ ಪತ್ನಿಗೆ ಲೋಕಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ. ಪ್ರಮುಖ ಕ್ಷೇತ್ರವೊಂದರಿಂದಲೇ ಟಿಕೆಟ್ ಬಯಸಿದ್ದು ಈಗಾಗಲೇ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. 

ಚಂಡೀಗಢ : ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪತ್ನಿ ಮಾಜಿ ಸಚಿವೆ ನವಜೋತ್ ಕೌರ್ ಸಿಧುಗೆ ಚಂಡೀಗಢದಿಂದ ಲೋಕಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ. 

ನವಜೋತ್ ಕೌರ್ ಚಂಡೀಗಢದಿಂದ ಲೋಕಸಭೆಗೆ ಸ್ಪರ್ಧೆ ಮಾಡಲು ಬಯಸಿದ್ದು, ಈಗಾಗಲೇ ಅತ್ಯಧಿಕ ಸಂಖ್ಯೆಯ ಆಕಾಂಕ್ಷಿಗಳು ಇಲ್ಲಿಂದಲೇ ಚುನಾವಣೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. 

ಅಲ್ಲದೇ ಕಾಂಗ್ರೆಸ್ ಮುಖಂಡರಾದ  ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಹಾಗೂ ಮಾಜಿ ಕೇಂದ್ರ ಸಚಿವ ಮನೀಷ್ ತಿವಾರಿ ಅವರೂ ಕೂಡ ಇದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.  ಸದ್ಯ ಬಿಜೆಪಿ ಸಂಸದೆ ಕಿರಣ್ ಕೇರ್ ಚಂಡೀಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.  

ಈಗಾಗಲೇ ನವಜೋತ್ ಕೌರ್ ತಮ್ಮ  ಅರ್ಜಿಯನ್ನು ಚಂಡೀಗಢ ಕಾಂಗ್ರೆಸ್ ಸಮಿತಿಗೆ ಗುಜರಾಯಿಸಿದ್ದು,  ಮುಂದಿನ ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ ಎಂದು ತಮ್ಮ ಅರ್ಜಿಯ ಮೂಲಕ ತಿಳಿಸಿದ್ದಾರೆ.  ಅಲ್ಲದೇ ತಮ್ಮ ಕಾರ್ಯದ ಬಗ್ಗೆಯೂ ಕೂಡ ಈ ಅರ್ಜಿಯಲ್ಲಿ ಮಾಹಿತಿಯನ್ನು ಲಗತ್ತಿಸಿದ್ದಾರೆ.  

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!