NDA ಮೈತ್ರಿ ಮೇಲೆ ಇದೀಗ ಮತ್ತೊಂದು ಪಕ್ಷದ ಮುನಿಸು

By Web Desk  |  First Published Jun 2, 2019, 10:10 AM IST

ಕೇಂದ್ರದಲ್ಲಿ ಈಗಾಗಲೇ ಎನ್ ಡಿ ಎ ಅಧಿಕಾರಕ್ಕೆ ಏರಿದೆ. ಆದರೆ ಮೈತ್ರಿ ಪಕ್ಷಗಳಲ್ಲಿ ಮಾತ್ರ ಖಾತೆ ಹಂಚಿಕೆ ಅಸಮಾಧಾನ ವ್ಯಕ್ತವಾಗುತ್ತಿದೆ.


ಮುಂಬೈ: ಎನ್‌ಡಿಎ ಭಾಗವಾಗಿದ್ದ ಜೆಡಿಯು ಅಧಿಕಾರ ಹಂಚಿಕೆಯಲ್ಲಿ ಅಸಮಾಧಾನಗೊಂಡು ಮೈತ್ರಿಯಿಂದ ಹೊರಬಂದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಶಿವಸೇನೆ ಕೂಡ ತನಗೆ ನೀಡಿದ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 

ಸಂಪುಟದಲ್ಲಿ 4 ಸಚಿವ ಸ್ಥಾನ ಜೊತೆಗೆ ಪ್ರಮುಖ ಖಾತೆ ಗಳಿಗೆ ಶಿವಸೇನೆ ಬೇಡಿಕೆ ಇಟ್ಟಿತ್ತು. 

Tap to resize

Latest Videos

ಆದರೆ ಬಿಜೆಪಿ ನಾಯಕರು ಅರವಿಂದ್ ಸಾವಂತ್‌ಗೆ ಮಾತ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ನೀಡಲಾಗಿದೆ. ಸಾವಂತ್ ನೀಡಿದ್ದ ಖಾತೆ ಅಷ್ಟೇನೂ ಮಹತ್ವದದ್ದಲ್ಲ ಎಂದು ಶಿವಸೇನೆ ಸೇನೆ ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

click me!