ಮಹಾ ಸರ್ಕಾರಕ್ಕೆ 500 ಕೋಟಿ ರೂ. ಸಾಲ ಕೊಟ್ಟ ಶಿರಡಿ ಟ್ರಸ್ಟ್!

By Web DeskFirst Published Dec 2, 2018, 2:04 PM IST
Highlights

ಮಹಾರಾಷ್ಟ್ರ ಸರ್ಕಾರಕ್ಕೆ ಬಡ್ಡಿರಹಿತ ಸಾಲ ನೀಡಿದ  ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ! ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ 500 ಕೋಟಿ ರೂ. ಬಡ್ಡಿರಹಿತ ಸಾಲ! ಅಹ್ಮದ್ ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಾಲ! ನೀರಾವರಿ ಯೋಜನೆಗೆ ದೇವಾಲಯ ಬಡ್ಡಿರಹಿತ ಸಾಲ ನೀಡಲು ಒಪ್ಪಿಗೆ! 

ಮುಂಬೈ(ಡಿ.02): ಹಣಕಾಸು ಅವಶ್ಯಕತೆ ಹೊಂದಿರುವ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಬಡ್ಡಿ ರಹಿತವಾಗಿ 500 ಕೋಟಿ ರೂ. ಸಾಲ ನೀಡಿದೆ. 

ಅಹ್ಮದ್ ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ನೀರಾವರಿ ಯೋಜನೆ ಪ್ರಾರಂಭವಾಗಿದ್ದು, ಯೋಜನೆ ಪೂರ್ಣಗೊಳ್ಳುವುದಕ್ಕೆ ಶಿರಡಿ ಸಾಯಿಬಾಬ ದೇವಾಲಯ ಟ್ರಸ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸಾಲ ನೀಡಿದೆ. 

ಯೋಜನೆ ಪೂರ್ಣಗೊಳಿಸುವುದಕ್ಕಾಗಿ ಆರ್ಥಿಕ ಸಹಾಯ ಕೇಳಲು ಬಿಜೆಪಿ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಇದರಂತೆ ಸರ್ಕಾರದ ಪ್ರತಿನಿಧಿಗಳು ಶಿರಡಿ ಟ್ರಸ್ಟ್  ಅಧ್ಯಕ್ಷರೂ ಆಗಿರುವ ಬಿಜೆಪಿ ನಾಯಕ ಸುರೇಶ್ ಹವಾರೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. 

ಈ ಹಿನ್ನೆಲೆಯಲ್ಲಿ ಶಿರಡಿ ಟ್ರಸ್ಟ್ ಸರ್ಕಾರಕ್ಕೆ 500 ಕೋಟಿ ರೂ. ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಇದೆ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಯೋಜನೆಗೆ ಈ ಪ್ರಮಾಣದಲ್ಲಿ ಬಡ್ಡಿ ರಹಿತ ಸಾಲ ನೀಡಲಾಗಿದ್ದು, ಹಣವನ್ನು ಹಿಂತಿರುಗಿಸುವುದಕ್ಕೂ ಯಾವುದೇ ಗಡುವು ವಿಧಿಸಲಾಗಿಲ್ಲ. 

ಒಟ್ಟು 1,200 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗೆ ದೇವಾಲಯ ಬಡ್ಡಿರಹಿತವಾಗಿ 500 ಕೋಟಿ ರೂ. ನೀಡಿದೆ.

click me!