ಮೋದಿ ಮುಸ್ಲಿಮರ ಟೋಪಿ ಧರಿಸಲ್ಲ ಎಂದ ತರೂರ್‌ಗೆ ಮಂಗಳಾರತಿ!

By Web DeskFirst Published Aug 6, 2018, 10:50 PM IST
Highlights

ಒಂದೆಲ್ಲಾ ಒಂದು ವಿವಾದವನ್ನು ಕಾರಣವಿಲ್ಲದೆ ಮೈಮೇಲೆ ಎಳೆದುಕೊಳ್ಳುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಈ ಬಾರಿ ಮೋದಿ ಕುರಿತು ಮಾತನಾಡಿದ್ದಾರೆ. ಮುಸ್ಲಿಮರ ಟೋಪಿ ವಿಚಾರದಲ್ಲಿ ಮೋದಿ ಬಗ್ಗೆ ಮಾತನಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.

ನವದೆಹಲಿ[ ಆ. 6]  ಸ್ವಾಮಿ ವಿವೇಕಾನಂದರು ಈಗ ಇದ್ದಿದ್ದರೆ ಅವರ ಮೇಲೆಯೂ ದಾಳಿಯಾಗುತ್ತಿತ್ತು ಎಂದು ಹೇಳಿಕೆ ನೀಡಿ ಸೋಮವಾರ ಬೆಳಿಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಲ್ಲ ವೇಷಭೂಷಣ ತೊಡುವ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಟೋಪಿ ಯಾಕೆ ಧರಿಸುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ ಉಪನ್ಯಾಸವೊಂದರಲ್ಲಿ ಅವರು ಮಾತನಾಡುತ್ತ, 'ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್'  ಎಂದು ಮೋದಿ ಹೇಳುತ್ತಿದ್ದರೂ ಒಂದು ವರ್ಗವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಹಿಂಸಾಚಾರಗಳು ಹೆಚ್ಚಿವೆ. ನಾಗರಿಕರು ಅಭದ್ರತೆಯ ಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದರು. ಮೋದಿ ಮತ್ತು ಸಮುದಾಯವೊಂದಕ್ಕೆ ನೋವಾಗುವ ಹೇಳಿಕೆ ನೀಡಿರುವ ತರೂರ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

 

 

Shashi Tharoor insults the proud cultural heritage of the people of North-East.

This condescension & arrogance towards the people of India have become hallmarks of . pic.twitter.com/vul4SOtpVN

— Rajyavardhan Rathore (@Ra_THORe)

Congress Party & Shashi Tharoor ji please explain what's the English meaning of outlandish & hilarious headgear?
You can't get away after insulting the Tribal & North East people. https://t.co/8nQ22AyNHA

— Kiren Rijiju (@KirenRijiju)
click me!