ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯ ಸರ್ಕಾರದ ನಡೆಗೆ ಶ್ಯಾಮನೂರು ಶಿವಶಂಕರಪ್ಪ ಸಡ್ಡು

By Suvarna Web DeskFirst Published Mar 20, 2018, 3:20 PM IST
Highlights

ಲಿಂಗಾಯತ ಪ್ರತ್ಯೇಕಧರ್ಮ ನಡೆಗೆ ರಾಜ್ಯ ಸರ್ಕಾರದ ವಿರುದ್ಧ ಶ್ಯಾಮನೂರು ಶಿವಶಂಕರಪ್ಪ ಸಡ್ಡು ಹೊಡೆದಿದ್ದಾರೆ. 

ಬೆಂಗಳೂರು (ಮಾ. 20): ಲಿಂಗಾಯತ ಪ್ರತ್ಯೇಕಧರ್ಮ ನಡೆಗೆ ರಾಜ್ಯ ಸರ್ಕಾರದ ವಿರುದ್ಧ ಶ್ಯಾಮನೂರು ಶಿವಶಂಕರಪ್ಪ ಸಡ್ಡು ಹೊಡೆದಿದ್ದಾರೆ. 

ವೀರಶೈವ ಲಿಂಗಾಯತ ಎಂದು ಧರ್ಮ ಮಾಡುವುದಿದ್ದರೆ ಒಪ್ಪುತ್ತಿದ್ದೆವು. ಮೊದಲು ವೀರಶೈವ ಇರಬೇಕಿತ್ತು ಎಂದು ಶ್ಯಾಮನೂರು ಶಿವಶಂಕರಪ್ಪ  ಮನೆಯಲ್ಲಿಯೇ ಸಭೆ ನಡೆಸಿ ಹೇಳಿದ್ದಾರೆ. ಸಭೆಯಲ್ಲಿ  ರಂಭಾಪುರಿ ಶ್ರೀ, ಉಜ್ಜಯನಿ ಶ್ರೀ ಸೇರಿ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.  

ಈ ಸಂಬಂಧ ಚರ್ಚಿಸಲು ಬೆಂಗಳೂರಿನಲ್ಲಿ ಮಾರ್ಚ್ 23ರಂದು ಮಹಾಸಭಾ ನಿರ್ಣಾಯಕ ಸಭೆ ಕೈಗೊಳ್ಳಲಿದೆ. ರಾಜ್ಯ ಸರ್ಕಾರಕ್ಕೆ ನಾವು ಯಾವುದೇ ಪತ್ರವನ್ನು ಬರೆಯುವ ಪ್ರಶ್ನೆಯಿಲ್ಲ.  ವೀರಶೈವ ಸಮುದಾಯ ಬಸವತತ್ವವನ್ನು ಒಪ್ಪುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ಶ್ಯಾಮನೂರು ಶಿವಶಂಕರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


 

click me!