ಲೈಂಗಿಕ ದೌರ್ಜನ್ಯ ಪ್ರಕರಣ : ಕಾಂಗ್ರೆಸ್ ಮುಖಂಡಗೆ ಕ್ಲೀನ್ ಚಿಟ್

By Web DeskFirst Published Jul 30, 2018, 1:12 PM IST
Highlights

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡಗೆ ಇದೀಗ ಕ್ಲೀನ್ ಚಿಟ್ ದೊರಕಿದೆ. ಚುನಾವಣಾ ಪ್ರಚಾರದ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಅವರ ವಿರುದ್ಧ ಆರೋಪ ಎದುರಾಗಿತ್ತು. 

ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪದಿಂದ ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಕ್ಲೀನ್ ಚಿಟ್ ದೊರಕಿದೆ.  ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸಂಸದರು ಹಾಗು ಶಾಸಕರ ವಿಶೇಷ ಕೋರ್ಟ್ ಕ್ಲೀನ್ ಚಿಟ್ ನೀಡಿದೆ.  

2013ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಲಮಾಣಿ ವಿರುದ್ಧ ದೂರು ನೀಡಿದ್ದರು. 

ಹಾವೇರಿಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿತ್ತು. ಮಹಿಳೆಯನ್ನು ಮನೆಯಲ್ಲಿ ಕೂಡಿ ಹಾಕಿ ಸೀರೆ ಎಳೆದು, ಅಸಭ್ಯವಾಗಿ ವರ್ತನೆ ಆರೋಪ ಎದುರಾಗಿತ್ತು. ರುದ್ರಪ್ಪ ಲಮಾಣಿ ಸೇರಿ ಹಲವರ ವಿರುದ್ದ ದೂರು ದಾಖಲಾಗಿತ್ತು. ಬಳಿಕ ಈ ಸಂಬಂಧ ತನಿಖೆ ನಡೆಸಿದ್ದ ಹಾವೇರಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣವನ್ನು ಇತ್ತೀಚಿಗಷ್ಟೇ ಬೆಂಗಳೂರಿನ ವಿಶೇಷ ಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.  ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲ ಯ  ಸೋಮವಾರ ತೀರ್ಪು ಪ್ರಕಟ ಮಾಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ ರುದ್ರಪ್ಪ ಲಮಾಣಿ ಸೇರಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿದೆ.

click me!