ಪ್ರಾಣಿಗಳ ಜತೆ ಸೆಕ್ಸ್ ಯಾಕೆ ಬಿಟ್ರಿ? ಸುಪ್ರೀಂಗೆ ಸುಬ್ರಮಣಿಯನ್ ಸ್ವಾಮಿ ಖಡಕ್ ಪ್ರಶ್ನೆ

By Web DeskFirst Published Sep 6, 2018, 3:03 PM IST
Highlights

ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿಗೆ ತಮ್ಮದೇ ರೀತಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಕಾನೂನು ತಜ್ಞ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ..

ನವದೆಹಲಿ[ಸೆ.6]  ಸಲಿಂಗ ಕಾಮದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ,377 ನೇ ಸೆಕ್ಷನ್ ಗೆ ಅಂತ್ಯ ಹಾಡಿರುವ ನ್ಯಾಯಾಲಯ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ವಿಚಾರವನ್ನು ಯಾಕೆ ಮುಟ್ಟಿಲ್ಲ . ಹಾಗಾದರೆ ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುತ್ತಿದ್ದೆಯೇ?  ಎಂದು ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮವೊಂದರ ಜತೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಈ ತೀರ್ಮಾನ ಅಂತಿಮ ಎಂದು ಪರಿಭಾವಿಸಲು ಸಾಧ್ಯವಿಲ್ಲ. ಇಂಥದ್ದೊಂದು ತೀರ್ಪು ಸಮಾಜದ ಸ್ವಾಸ್ಥ್ಯ ಕದಡಿ ಲೈಂಗಿಕ  ರೋಗಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್

ಸಲಿಂಗ ಕಾಮ ಎನ್ನುವುದು ಒಂದು ನ್ಯೂನತೆ. ಇದೊಂದು ಕೆಟ್ಟ ಮಾನಸಿಕ ಸ್ಥಿತಿ, ಒಂದು ಪೀಳಿಗೆಯನ್ನೇ ಆತಂಕಕ್ಕೆ ದೂಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ 2015 ರಲ್ಲಿ ಟ್ವೀಟ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದು ಇದೀಗ ದೇಶದ ತುಂಬಾ ಚರ್ಚೆ ಹುಟ್ಟುಹಾಕಿದೆ.

click me!