
ಬೆಂಗಳೂರು(ಜೂ.09): ಎರಡು ಸಾವಿರ ರು. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಧಾರಾವಾಹಿ ನಟಿ ಮತ್ತು ಆಟೋ ಚಾಲಕನನ್ನು ಅಂಗಡಿಯ ಮಾಲೀಕರು ಬೆನ್ನಟ್ಟಿಹಿಡಿದು ದಾಬಸ್‌ಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಆಂಧ್ರದ ಅನಂತಪುರ ಮೂಲದ, ಹಾಲಿ ಬೆಂಗಳೂರು ನಗರದ ನಂದಿನಿ ಲೇಔಟ್ ನಿವಾಸಿ, ಧಾರಾವಾಹಿ ನಟಿ ಜಯಮ್ಮ (50), ಆಟೋ ಚಾಲಕ ಗೋವಿಂದ ರಾಜು ಬಂಧಿತ ಆರೋಪಿಗಳು. ಇವರಿಂದ .2 ಸಾವಿರ ಮುಖಬೆಲೆಯ 20ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರು ಆಟೋದಲ್ಲಿ ಬೆಂಗಳೂರಿನ ಹೊರಭಾಗದಲ್ಲಿ ಸಂಚರಿಸಿ, ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳಿಂದ ತಿಂಡಿ, ತಿನಿಸು, ಸಣ್ಣಪುಟ್ಟವಸ್ತುಗಳನ್ನು ಖರೀದಿಸುತ್ತಿದ್ದರು. ಅಂಗಡಿ ಮಾಲೀಕರಿಗೆ .2 ಸಾವಿರ ಖೋಟಾ ನೋಟನ್ನು ನೀಡಿ ಚಿಲ್ಲರೆ ಪಡೆದು ಪರಾರಿಯಾಗುತ್ತಿದ್ದರು. ಇವರಿಂದ ಮೋಸಹೋದ ವ್ಯಾಪಾರಸ್ಥರು ಗುರುವಾರ ಅವರನ್ನು ಆಟೋದಲ್ಲಿ ನೋಡುತ್ತಿದ್ದಂತೆ ಬೆನ್ನಟ್ಟಿಹಿಡಿದು ದಾಬಸ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.