
ಮುಂಬೈ (ಡಿ. 12): ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ, ಮಂಗಳವಾರ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಭಾನುವಾರ ಪ್ರಕಟಗೊಂಡ ಪಂಚರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು, ಈ ಬಾರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿನ ಸುಳಿವು ನೀಡಿದ್ದವು.
ಹೀಗಾಗಿ ಸೋಮವಾರ, ಸೆನ್ಸೆಕ್ಸ್ 714 ಅಂಕಗಳ ಭಾರೀ ಕುಸಿತ ಕಂಡಿತ್ತು. ಜೊತೆಗೆ ಸೋಮವಾರ ಸಂಜೆ ವೇಳೆಗೆ ಆರ್‌ಬಿಐ ಗವರ‌್ನರ್ ಊರ್ಜಿತ್ ಪಟೇಲ್ ದಿಢೀರನೆ ರಾಜೀನಾಮೆ ಪ್ರಕಟಿಸಿದ್ದರು. ಹೀಗಾಗಿ ಮಂಗಳವಾರ ಚುನಾವಣಾ ಸಮೀಕ್ಷೆಗಳು ನಿಜವಾಗಿದ್ದೇ ಆದಲ್ಲಿ ಷೇರುಪೇಟೆಯಲ್ಲಿ ಮತ್ತೊಂದು ಮಹಾಪತನದ ಭೀತಿ ಎದುರಾಗಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಮಂಗಳವಾರ ಬೆಳಗ್ಗೆ ಷೇರುಪೇಟೆ ಕುಸಿತ ಕಂಡಿದ್ದರೂ, ದಿನದಂತ್ಯಕ್ಕೆ ಸೆನ್ಸೆಕ್ಸ್ 190 ಅಂಕಗಳ ಏರಿಕೆ ಕಂಡು 35,150 ಅಂಕಗಳಲ್ಲಿ ಮುಕ್ತಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.