
ನವದೆಹಲಿ: ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸರಿ ಸಮನಾಗಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅನಾಥರಿಗೂ ಮೀಸಲಾತಿ ನೀಡುವ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೋಗೊಯ್ ಮತ್ತು ಆರ್.ಭಾನುಮತಿ ಅವರಿದ್ದ ಪೀಠ, ಉದ್ಯಮಗಳ ಸ್ಥಾಪನೆಗಾಗಿ ಬ್ಯಾಂಕ್ ಸಾಲ ಸೇರಿದಂತೆ ಇತರ ಪ್ರಯೋಜನೆಗಳನ್ನು ಅನಾಥರು ಪಡೆಯುವ ಸಂಬಂಧ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅನಾಥರಿಗೆ ಬಲವಂತವಾಗಿ ಸರ್ಕಾರವೇ ಒಂದು ಜಾತಿ, ಧರ್ಮವನ್ನು ನೀಡುತ್ತದೆ. ಇದರ ಬದಲಾಗಿ ತಮ್ಮ ಇಷ್ಟದ ಧರ್ಮದ ಆಯ್ಕೆಗಾಗಿ ಅನಾಥರಿಗೆ ಅನುಮತಿ ಕೊಡಬೇಕು. ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡಬೇಕು ಎಂದು ಕೋರಿ ಉತ್ತರ ಪ್ರದೇಶದ ಮೂಲದ ಪೌಲೊಮಿ ಪಾವನಿ ಶುಕ್ಲಾ ಎಂಬುವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.