ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ವೇಳೆ ದಿವ್ಯಾಂಗರಿಗೆ ವಿನಾಯ್ತಿ

By Suvarna Web DeskFirst Published Dec 9, 2016, 3:01 PM IST
Highlights

ರಾಷ್ಟ್ರಗೀತೆ ಮೊಳಗುವ ವೇಳೆ ದಿವ್ಯಾಂಗರು ಎದ್ದು ನಿಲ್ಲುವುದರಿಂದ ವಿನಾಯ್ತಿ ನೀಡಲಾಗಿದೆ.

ನವದೆಹಲಿ(ಡಿ.09): ರಾಷ್ಟ್ರಾದ್ಯಂತ ಇರುವ ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕೆಂಬ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿದೆ.

ರಾಷ್ಟ್ರಗೀತೆ ಮೊಳಗುವ ವೇಳೆ ದಿವ್ಯಾಂಗರು ಎದ್ದು ನಿಲ್ಲುವುದರಿಂದ ವಿನಾಯ್ತಿ ನೀಡಲಾಗಿದೆ. ಅಲ್ಲದೆ, ರಾಷ್ಟ್ರಗೀತೆ ಪ್ರಾರಂಭವಾದ ಸಂದರ್ಭದಲ್ಲಿ ಚಿತ್ರಮಂದಿರದ ಬಾಗಿಲುಗಳ ಬೋಲ್ಟ್ ಹಾಕುವ ಅಗತ್ಯವಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

ಈ ಬಗ್ಗೆ ಸಲ್ಲಿಕೆಯಾದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ ರಾವ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ‘‘ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ದಿವ್ಯಾಂಗರು ಯಾವ ರೀತಿ ಗೌರವ ನೀಡಬೇಕೆಂಬುದರ ಬಗ್ಗೆ 10 ದಿನಗಳೊಳಗೆ ಕೇಂದ್ರ ಸರ್ಕಾರ ಕೆಲ ಮಾರ್ಗ ಸೂಚಿಗಳನ್ನು ಹೊರಡಿಸುತ್ತದೆ,’’ ಎಂದು ಸುಪ್ರೀಂ ಕೋರ್ಟ್‌ಗೆ ಅಟರ್ನಿ ಜನರಲ್ ಮುಕುಲ್ ರೊಹಟಗಿ ತಿಳಿಸಿದರು.

click me!