
ನವದೆಹಲಿ(ಜು.06): ಲಕ್ಷ ಕೋಟಿ ರು. ಮೌಲ್ಯದ ಬೆಳ್ಳಿ, ಚಿನ್ನ, ವಜ್ರದ ಆಭರಣಗಳು ಇದೆ ಎನ್ನಲಾದ ಕೇರಳದ ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ದೇವಾಲಯದ ಆಡಳಿತದ ಮೇಲೆ ನಿಗಾ ಇಡಲು ಇನ್ನು ತನಗೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ಅಪಾರ ಸಂಪತ್ತು ಇದೆ ಎಂದು ಹೇಳಲಾದ ದೇಗುಲದ ನೆಲಮಾಳಿಗೆಯಲ್ಲಿರುವ ‘ಬಿ’ ರಹಸ್ಯ ಕೊಠಡಿ ತೆರೆಯುವುದನ್ನು ತಾನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮಂಗಳವಾರ ವಿಚಾರಣೆ ವೇಳೆ ‘ಬಿ’ ಕೊಠಡಿಯನ್ನು ತೆರೆಯಬೇಕು ಎಂಬ ಅಮಿಕಸ್ ಕ್ಯುರಿ ಗೋಪಾಲ್ ಸುಬ್ರಮಣಿಯಂ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್. ಖೇಹರ್ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ ಅವರ ಪೀಠ ತಿಳಿಸಿದೆ. ಬಿ ಕೊಠಡಿ ತೆರೆದರೆ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆ ಇರುವ ಕಾರಣ ಅದನ್ನು ಇನ್ನೂ ತರೆದಿಲ್ಲ.
ದೇಗುಲದಲ್ಲಿ ಕಳವು ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಯನ್ನು ಕಲ್ಪಿಸಿಬೇಕು. ದೇಗುಲಕ್ಕೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಆಡಳಿತ ಮಂಡಳಿ ರಚಿಸಬೇಕು. ದೇಗುಲದ ದೈನಂದಿನ ವಹಿವಾಟುಗಳನ್ನು ನೋಡಿಕೊಳ್ಳಲು ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಬೇಕು. ಹಣಕಾಸು ವ್ಯವಸ್ಥೆ ನೋಡಿಕೊಳ್ಳಲು ಹಣಕಾಸು ನಿಯಂತ್ರಕರನ್ನು ನೇಮಕ ಮಾಡಬೇಕೆಂದು ಸರಣಿ ಆದೇಶಗಳನ್ನು ನೀಡಿದೆ. ಪ್ರಸಕ್ತ ದೇಗುಲಕ್ಕೆ ನಿತ್ಯ 200 ಪೊಲೀಸರ ಭದ್ರತೆ ದಿನದ 24 ತಾಸೂ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.