
ನವದೆಹಲಿ (ಸೆ.12): ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಗಳು 6 ತಿಂಗಳುಗಳ ಕಾಲ ಒಟ್ಟಿಗೆ ವಾಸ ಮಾಡುವ ಅವಧಿ ಕಡ್ಡಾಯವೇನಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದಂಪತಿಗಳ ಪರಸ್ಪರ ಸಮ್ಮತಿ ಇದ್ದರೆ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸಬೇಕೆನ್ನುವ ಕಡ್ಡಾಯವೇನಿಲ್ಲವೆಂದು ಕೋರ್ಟ್ ಹೇಳಿದೆ.
ನ್ಯಾ. ಉದಯ್ ಯು ಲಲಿತ್ ಹಾಗೂ ಆದರ್ಶ್ ಕೆ ಗೋಯಲ್ ನೇತೃತ್ವದ ನ್ಯಾಯಪೀಠವು ಈ ಮಹತ್ತರ ತೀರ್ಪನ್ನು ನೀಡಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಗಳು ವಿಚ್ಛೇದನ ಪಡೆಯಲು 18 ತಿಂಗಳು ಕಾಯಬೇಕಾಗುತ್ತದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13(ಬಿ) ಅಡಿಯಲ್ಲಿ ದಂಪತಿಗಳು 1 ವರ್ಷ ಬೇರೆ ಬೇರೆಯಾಗಿ ವಾಸಿಸಬೇಕು. ಸೆಕ್ಷನ್ 13ಬಿ (2) ರ ಅಡಿಯಲ್ಲಿ ತಿಂಗಳು ಒಟ್ಟಿಗೆ ವಾಸ ಮಾಡಬೇಕು. ಆದರೆ ದಂಪತಿಗಳು ಒಪ್ಪಿಗೆ ಸೂಚಿಸಿದರೆ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸುವುದನ್ನು ರದ್ದು ಮಾಡಿ ವಿಚಾರಣೆಯನ್ನು ತ್ವರಿತಗೊಳಿಸಬಹುದು. ಇದು ಕಡ್ಡಾಯವೇನಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಾವು ಕಳೆದ 8 ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ. 6 ತಿಂಗಳುಗಳ ಕಾಲ ಒಟ್ಟಿಗೆ ಬಾಳುವುದರಿಂದ ನಮ್ಮಿಬ್ಬರ ನಡುವೆ ಹೊಂದಾಣಿಕೆ ಮೂಡಲು ಸಾಧ್ಯವೇ ಇಲ್ಲ. ಹಾಗಾಗಿ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸುವುದನ್ನು ರದ್ದು ಮಾಡಿ ಎಂದು ದೆಹಲಿ ಮೂಲದ ದಂಪತಿಗಳೊಬ್ಬರು ಸುಪ್ರೀಂಕೋರ್ಟ್’ಗೆ ಕೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.