ಎಸ್'ಬಿಐ ನೂತನ ಪರಿಷ್ಕರಣೆಯ ಶುಲ್ಕಗಳು ಇಂದಿನಿಂದ ಆರಂಭ: ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

Published : Jun 01, 2017, 08:50 PM ISTUpdated : Apr 11, 2018, 12:57 PM IST
ಎಸ್'ಬಿಐ ನೂತನ ಪರಿಷ್ಕರಣೆಯ ಶುಲ್ಕಗಳು ಇಂದಿನಿಂದ ಆರಂಭ: ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

ಸಾರಾಂಶ

ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ ನೂತನ ಪರಿಷ್ಕರಣೆಯ ದರಗಳು ಇಂದಿನಿಂದ ಆರಂಭಗೊಂಡಿವೆ. ಯಾವುದಕ್ಕೆ ಎಷ್ಟೆಷ್ಟು ದರಗಳು ಅನ್ವಯಿಸುತ್ತವೆ ಇಲ್ಲಿದೆ ಮಾಹಿತಿ

ಮುಂಬೈ(ಜೂ.01): ಭಾರತದ ಸಾರ್ವಜನಿಕ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ ನೂತನ ಪರಿಷ್ಕರಣೆಯ ದರಗಳು ಇಂದಿನಿಂದ ಆರಂಭಗೊಂಡಿವೆ. ಯಾವುದಕ್ಕೆ ಎಷ್ಟೆಷ್ಟು ದರಗಳು ಅನ್ವಯಿಸುತ್ತವೆ ಇಲ್ಲಿದೆ ಮಾಹಿತಿ

1) ಉಳಿತಾಯ ಖಾತೆ ಹೊಂದಿರುವವರಿಗೆ 8 ಬಾರಿ ಉಚಿತ ಎಟಿಎಂ ವಹಿವಾಟು ಇರಲಿದ್ದು, ಇದರಲ್ಲಿ 5 ಎಸ್'ಬಿಐ ಎಟಿಎಂಗಳು ಹಾಗೂ 3 ಇತರ ಎಟಿಎಂ ಒಳಗೊಂಡಿರುತ್ತದೆ. ಇದು ಮೆಟ್ರೋ ಪಟ್ಟಣಗಳಿಗೆ ಅನ್ವಯವಾಗಲಿದ್ದು, ಮೆಟ್ರೋ'ಯೇತರ ಪಟ್ಟಣ'ಗಳ ಎಟಿಎಂ'ಗಳಲ್ಲಿ 10 ಬಾರಿ ಉಚಿತ ವಹಿವಾಟಿನ ಅವಕಾಶವಿದೆ.

2) ನೂತನ ಎಟಿಎಂ ಕಾರ್ಡು ಪಡೆಯುವವರಲ್ಲಿ 'ರೂಪೇ ಕ್ಲಾಸಿಕ್' ಕಾರ್ಡ್'ಅನ್ನು ಮಾತ್ರ ಉಚಿತವಾಗಿ ಪಡೆಯುವ ಅವಕಾಶವಿದೆ. ಉಳಿದವನ್ನು ಪಡೆಯಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ.

3) ಉಳಿತಾಯ ಖಾತೆಯಲ್ಲಿ ಚೆಕ್ ಬುಕ್ ಪಡೆಯಲು 3 ರೀತಿಯ ಶುಲ್ಕ ಪಾವತಿಸಬೇಕಿದೆ. 10 ಹಾಳೆಗಾಗಿ ರೂ. 30, 25 ಹಾಳೆಗೆ 75 ರೂ ಹಾಗೂ 50 ಹಾಳೆಯಿರುವ ಚೆಕ್'ಬುಕ್'ಗೆ 150 ರೂ. ಪಾವತಿಸಬೇಕಿದೆ.

4) ಯುಪಿಐ ಹಾಗೂ ಇತರ ಡಿಜಿಟಲ್ ವಹಿವಾಟಿನ ಮೂಲಕ ಐಎಂಪಿಎಸ್(ತಕ್ಷಣ ಪಾವತಿ ಸೇವೆ) ಹಣ ವರ್ಗಾವಣೆಗೆ ವಿವಿಧ ರೀತಿಯ ಶುಲ್ಕವಿರುತ್ತದೆ. 1 ಲಕ್ಷದವರೆಗೂ 5 ರೂ, 1ರಿಂದ 2 ಲಕ್ಷದ ವರೆಗೂ 15 ರೂ. ಹಾಗೂ 2 ಲಕ್ಷದಿಂದ 5 ಲಕ್ಷದವರೆಗೆ 25 ರೂ. ಮೊತ್ತ ಪಾವತಿಸಬೇಕು. ಈ ಶುಲ್ಕಗಳು ಸೇವಾ ತೆರಿಗೆಯನ್ನು ಹೊರತುಪಡಿಸುತ್ತವೆ.

5) ಕೊಳೆಯಾದ ಹಾಗೂ ಹರಿದ ನೋಟುಗಳಿಗೂ ಶುಲ್ಕ ಅನ್ವಯವಾಗಲಿವೆ. 5 ಸಾವಿರ ಮೌಲ್ಯದ  20 ನೋಟುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.5 ಸಾವಿರದವರೆಗೆ 20ಕ್ಕೂ ಹೆಚ್ಚು ನೋಟುಗಳಿದ್ದರೆ ಪ್ರತಿ ನೋಟಿಗೂ 2 ರೂ. ದರ ವಿಧಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ: ನಭಕ್ಕೆ ಚಿಮ್ಮಿದ LVM3 M6
ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್