
ನವದೆಹಲಿ (ನ.18): ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯರವರ ಸಾಲವನ್ನು ಎಸ್ ಬಿಐ ಮನ್ನಾ ಮಾಡಿದೆ ಎನ್ನುವ ಮಾಧ್ಯಮ ವರದಿಯನ್ನು ಎಸ್ ಬಿಐ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ ನಿರಾಕರಿಸಿದ್ದಾರೆ.
“ನಮ್ಮ ಬ್ಯಾಂಕಿನ ಗೌರವಕ್ಕೆ ಕಳಂಚ ತರಲು ಮಾಧ್ಯಮದವರು ಈ ರೀತಿ ಆರೋಪ ಮಾಡಿದ್ದಾರೆ" ಎಂದಿದ್ದಾರೆ.
ಬಾಕಿಯಿರುವ ಸುಸ್ತಿದಾರ ಸಂಗ್ರಹ ಖಾತೆಗೆ ಇವರ ಖಾತೆಯನ್ನು ಸೇರಿಸುವುದರಿಂದ ಲೆಕ್ಕಾಚಾರಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗುತ್ತದೆ. ಎಸ್ ಬಿಐ ಮಲ್ಯರವರಿಂದ ಹಣವನ್ನು ವಸೂಲು ಮಾಡುತ್ತದೆ. ಆದರೆ
ಸಮಯಾವಕಾಶ ಹಿಡಿಯಬಹುದು ಎಂದು ಅರುಂಧತಿ ಭಟ್ಟಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.