ಸೌದಿ ಪ್ರಮುಖ ತೈಲ ನಿಕ್ಷೇಪದ ಮೇಲೆ ಡ್ರೋಣ್ ದಾಳಿ!

By Web DeskFirst Published Sep 14, 2019, 10:03 PM IST
Highlights

ಸೌದಿ ಪ್ರಮುಖ ತೈಲ ನಿಕ್ಷೇಪದ ಮೇಲೆ ಡ್ರೋಣ್ ದಾಳಿ| ಯೆಮನ್’ನ ಹೌತಿ ಬಂಡುಕೋರರಿಂದ ಡ್ರೋಣ್ ದಾಳಿಯ ಶಂಕೆ| ಬುಖ್ಯಾಖ್ ಮತ್ತು ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ದಾಳಿ| ಅಬ್ಕೈಕ್ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಸ್ಥಿರೀಕರಣ ಘಟಕ 

ದುಬೈ(ಸೆ.14): ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋಣ್ ದಾಳಿ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. 

ಯೆಮನ್’ನ ಹೌತಿ ಬಂಡುಕೋರರು ಡ್ರೋಣ್ ದಾಳಿ ನಡೆಸಿದ್ದಾರೆ ಎಬ ಶಂಕೆ ಇದೆಯಾದರೂ, ಬಂಡುಕೋರರು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. 

ಬುಖ್ಯಾಖ್ ಮತ್ತು ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆದಿದ್ದು, ತೈಲ ಸಂಸ್ಕರಣಾ ಘಟಕದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬುಕ್ಯಾಕ್‌ನ ಅಬ್ಕೈಕ್ ತೈಲ ಸಂಸ್ಕರಣಾ ಘಟಕ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಸ್ಥಿರೀಕರಣ ಘಟಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿ ಕಚ್ಚಾ ತೈಲವನ್ನು ಸಿಹಿ ಕಚ್ಚಾ ತೈಲ ಆಗಿ ಪರಿವರ್ತಿಸಿ ನಂತರ ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಟ್ರಾನ್ಸ್‌ಶಿಪ್ಮೆಂಟ್ ಪಾಯಿಂಟ್‌ಗಳಿಗೆ ಸಾಗಿಸಲಾಗುತ್ತದೆ. 

ಅಬ್ಕೈಕ್ ತೈಲ ಸಂಸ್ಕರಣಾ ಘಟಕದಲ್ಲಿ ದಿನಕ್ಕೆ 7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತದೆ. ಇನ್ನು ದಾಳಿಯ ಬಳಿಕ ಸೌದಿ ಅರೇಬಿಯಾ ತನ್ನ ಅರ್ಧದಷ್ಟು ತೈಲ ಉತ್ಪಾದನಾ ಘಟಕಗಳನ್ನು ಮುಚ್ಚಿದೆ ಎಂದು ಹೇಳಲಾಗಿದೆ.

click me!