ಪನ್ನೀರ್'ಗೆ ಚಿನ್ನಮ್ಮ ಮತ್ತೆ ಸೆಡ್ಡು: ಶಾಸಕಾಂಗ ನಾಯಕನಾಗಿ ಕೆ.ಪಳಿನಿಸ್ವಾಮಿ ಆಯ್ಕೆ

Published : Feb 14, 2017, 09:02 AM ISTUpdated : Apr 11, 2018, 01:00 PM IST
ಪನ್ನೀರ್'ಗೆ ಚಿನ್ನಮ್ಮ ಮತ್ತೆ ಸೆಡ್ಡು:  ಶಾಸಕಾಂಗ ನಾಯಕನಾಗಿ ಕೆ.ಪಳಿನಿಸ್ವಾಮಿ ಆಯ್ಕೆ

ಸಾರಾಂಶ

ಈ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ'ಗೆ ಮತ್ತೊಂದು ಶಾಕ್ ನೀಡಿರುವ  ಚಿನ್ನಮ್ಮ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಲೋಕೋಪಯೋಗಿ ಸಚಿವರಾದ ಕೆ.ಪಳಿನಿಸ್ವಾಮಿಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ನೆ ಮಾಡಿದ್ದಾರೆ.

ಚೆನ್ನೈ(ಫೆ.14): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ವಿಕೆ ಶಶಿಕಲಾಳನ್ನು 4 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ದಂಡ ವಿಧಿಸಿದ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಅನರ್ಹರಾಗಿದ್ದು ಮುಂದಿನ 10 ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ'ಗೆ ಮತ್ತೊಂದು ಶಾಕ್ ನೀಡಿರುವ  ಚಿನ್ನಮ್ಮ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಲೋಕೋಪಯೋಗಿ ಸಚಿವರಾದ ಕೆ.ಪಳಿನಿಸ್ವಾಮಿಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ನೆ ಮಾಡಿದ್ದಾರೆ. ಕೆಲವು ಕ್ಷಣಗಳಲ್ಲಿ ಸಚಿವ ಪಳಿನಿ ಸ್ವಾಮಿ ಬೆಂಬಲಿಗ ಶಾಸಕರ ಸಹಿಯ ಪ್ರತಿಯೊಂದಿಗೆ ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಕರನ್ ಅವರಿಗೂ 4 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ದಂಡ ವಿಧಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತೀ ದೊಡ್ಡ ಪರಾರಿಗಳು ನಾವೇ, ಮಲ್ಯ ಜೊತೆಗೆ ವಿಡಿಯೋ ಮೂಲಕ ಭಾರತ ಅಣಕಿಸಿದ ಲಲಿತ್ ಮೋದಿ
ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?