ಲಂಡನ್ ಪ್ರಶಸ್ತಿ ರೇಸಲ್ಲಿ ವಿಶ್ವದ ಎತ್ತರದ ಸರ್ದಾರ್‌ ಪ್ರತಿಮೆ!

Published : Aug 05, 2019, 08:54 AM IST
ಲಂಡನ್ ಪ್ರಶಸ್ತಿ ರೇಸಲ್ಲಿ ವಿಶ್ವದ ಎತ್ತರದ ಸರ್ದಾರ್‌ ಪ್ರತಿಮೆ!

ಸಾರಾಂಶ

ವಿಶ್ವದ ಅತ್ಯುತ್ತಮ ರಚನೆ ರೇಸಲ್ಲಿ ವಿಶ್ವದ ಎತ್ತರದ ಸರ್ದಾರ್‌ ಪ್ರತಿಮೆ| ಇನ್ಸ್‌ಸ್ಟಿಟ್ಯೂಷನ್‌ ಆಫ್‌ ಸ್ಟ್ರಕ್ಚರಲ್‌ ಎಂಜಿನಿಯ​ರ್‍ಸ್ನ ಸ್ಟ್ರಕ್ಚರಲ್‌ ಅವಾರ್ಡ್ಸ್-2019

ಅಹಮದಾಬಾದ್‌[ಆ.05]: ನರ್ಮದಾ ನದಿಯ ಮೇಲೆ ನಿರ್ಮಿಸಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆ ಬ್ರಿಟನ್‌ ಮೂಲದ ಇನ್ಸ್‌ಸ್ಟಿಟ್ಯೂಷನ್‌ ಆಫ್‌ ಸ್ಟ್ರಕ್ಚರಲ್‌ ಎಂಜಿನಿಯ​ರ್‍ಸ್ನ ಸ್ಟ್ರಕ್ಚರಲ್‌ ಅವಾರ್ಡ್ಸ್-2019 (ಅತ್ಯುತ್ತಮ ರಚನೆ ಪ್ರಶಸ್ತಿ)ಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

182 ಮೀಟರ್‌ ಎತ್ತರದ ಸರ್ದಾರ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ 2018ರ ಅಕ್ಟೋಬರ್‌-31ರಂದು ಅನಾವರಣಗೊಳಿಸಿದ್ದರು. ಬೃಹತ್‌ ಗಾತ್ರ ಹಾಗೂ ನಿರ್ಮಾಣವಾದ ಸ್ಥಳದ ಕಾರಣದಿಂದಾಗಿ ಸರ್ದಾರ್‌ ಪ್ರತಿಮೆ ವಿಶೇಷ ಎನಿಸಿಕೊಂಡಿದೆ. ಈ ರಚನೆ ನಿರ್ಮಿಸಲು ಎಂಜಿನಿಯರ್‌ಗಳು ಕಠಿಣ ಸಲವಾಲುಗಳನ್ನು ಎದುರಿಸಿದ್ದಾರೆ ಎಂದು ತೀರ್ಪುಗಾರರ ಸಮಿತಿ ಅಭಿಪ್ರಾಯಪಟ್ಟಿದೆ.

ಚೀನಾದ ಹಾಂಗ್ಜೌನಲ್ಲಿ ತಿರುಗುವ ಪ್ಯಾನಲ್‌ಗಳಿಂದ ನಿರ್ಮಿಸಿದ ಕ್ರೀಡಾಂಗಣ, ಲಂಡನ್‌ನಲ್ಲಿ ನೆಲದಿಂದ 22 ಮೀಟರ್‌ ಆಳದಲ್ಲಿ ನಿರ್ಮಿಸಿರುವ ಪಂಚತಾರಾ ಹೋಟೆಲ್‌ ಸೇರಿದಂತೆ ವಿಶ್ವದೆಲ್ಲಡೆಯ 49 ರಚನೆಗಳು ಪ್ರಶಸ್ತಿಯ ಸುತ್ತಿಗೆ ಆಯ್ಕೆ ಆಗಿದ್ದು ನ.15ರಂದು ಪ್ರಶಸ್ತಿ ಘೋಷಣೆ ಆಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!