ಮೋದಿ ಟ್ವೀಟ್ ಜನಪ್ರಿಯತೆಗೆ ಹಾಸ್ಯ- ವ್ಯಂಗ್ಯ ಕಾರಣ

Published : Nov 17, 2017, 12:05 PM ISTUpdated : Apr 11, 2018, 12:46 PM IST
ಮೋದಿ ಟ್ವೀಟ್ ಜನಪ್ರಿಯತೆಗೆ ಹಾಸ್ಯ- ವ್ಯಂಗ್ಯ ಕಾರಣ

ಸಾರಾಂಶ

ಮೋದಿ 6 ವರ್ಷಗಳಲ್ಲಿ 9 ಸಾವಿರ ಟ್ವೀಟ್ ಮಾಡಿದ್ದಾರೆ. ಅವರು ಮಾಡುವ ವ್ಯಂಗ್ಯ, ತಮಾಷೆ ಹಾಗೂ ಚುಚ್ಚುಮಾತಿನ ಟ್ವೀಟ್‌'ಗಳು ಜನರ ಮನಗೆದ್ದಿದ್ದು, ರೀ ಟ್ವೀಟ್ ಆಗಿವೆ ಎಂದು ಸಂಶೋಧನಾ ವರದಿ ತಿಳಿಸಿದೆ.

ವಾಷಿಂಗ್ಟನ್(ನ.17)   ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್‌'ನಲ್ಲಿ 3.6 ಕೋಟಿ ಹಿಂಬಾಲಕರ ಮೂಲಕ ದೇಶದಲ್ಲೇ ಅತಿ ಹೆಚ್ಚು ‘ಫಾಲೋವರ್ಸ್‌’ ಹೊಂದಿದ ರಾಜಕೀಯ ನಾಯಕ ಎನಿಸಿಕೊಂಡಿದ್ದಾರೆ. ಆದರೆ ಮೋದಿ ಏಕೆ ಟ್ವೀಟರ್‌'ನಲ್ಲಿ ಈ ಪರಿ ಜನಪ್ರಿಯರಾಗಿದ್ದಾರೆ ಎಂದು ಗೊತ್ತಾ? ಮೋದಿ ಅವರು ತಮ್ಮ ಟ್ವೀಟ್‌'ಗಳಲ್ಲಿ ತಮಾಷೆ ಹಾಗೂ ಚುಚ್ಚು ಮಾತುಗಳನ್ನು ಬಳಸುವುದರಿಂದಲೇ ಅನೇಕಾನೇಕ ಜನ ಅವರನ್ನು ಹಿಂಬಾಲಿಸುವಂತಾಗಿದೆ ಎಂದು ಅಮೆರಿಕದ ಮಿಷಿಗನ್ ವಿವಿಯ ಸಂಶೋಧಕರ ತಂಡವೊಂದು ಸಂಶೋಧನೆ ನಡೆಸಿದೆ.

ಮೋದಿ 6 ವರ್ಷಗಳಲ್ಲಿ 9 ಸಾವಿರ ಟ್ವೀಟ್ ಮಾಡಿದ್ದಾರೆ. ಅವರು ಮಾಡುವ ವ್ಯಂಗ್ಯ, ತಮಾಷೆ ಹಾಗೂ ಚುಚ್ಚುಮಾತಿನ ಟ್ವೀಟ್‌'ಗಳು ಜನರ ಮನಗೆದ್ದಿದ್ದು, ರೀ ಟ್ವೀಟ್ ಆಗಿವೆ ಎಂದು ಸಂಶೋಧನಾ ವರದಿ ತಿಳಿಸಿದೆ. ಮೋದಿ ಅವರ ಟ್ವೀಟ್‌'ಗಳನ್ನು 9 ಭಾಗ ಮಾಡಿ ಸಂಶೋಧನೆ ನಡೆಸಲಾಗಿದೆ.

ಚುನಾವಣೆ ಹಾಗೂ ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ವ್ಯಂಗ್ಯ ಹಾಗೂ ಚುಚ್ಚುಮಾತಿನ ಟ್ವೀಟ್'ಗಳಿಗೆ ಹೆಚ್ಚು ಸ್ಪಂದನೆ ದೊರೆತಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!