ಈತ ಸರಗಳ್ಳನೋ ಸ್ಯಾಂಡಲ್ವುಡ್ ಪ್ರೊಡ್ಯೂಸರೋ? ಪೊಲೀಸರಿಗೆ ಸಿಕ್ಕಿಬಿದ್ದ ಪ್ರತಾಪ್ ರಂಗು

Published : Oct 28, 2017, 01:37 PM ISTUpdated : Apr 11, 2018, 12:53 PM IST
ಈತ ಸರಗಳ್ಳನೋ ಸ್ಯಾಂಡಲ್ವುಡ್ ಪ್ರೊಡ್ಯೂಸರೋ? ಪೊಲೀಸರಿಗೆ ಸಿಕ್ಕಿಬಿದ್ದ ಪ್ರತಾಪ್ ರಂಗು

ಸಾರಾಂಶ

* ಸರಗಳ್ಳತನವು ಸ್ಯಾಂಡಲ್ವುಡ್ ನಿರ್ಮಾಪಕನ ಸೈಡ್ ಬ್ಯುಸಿನೆಸ್? * ಸರಗಳ್ಳತನ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ನಿರ್ಮಾಪಕ ಪ್ರತಾಪ್ ರಂಗು * 'ಡಬಲ್ ಮೀನಿಂಗ್' ಸಿನಿಮಾ ನಿರ್ಮಾಣ ಮಾಡಿದ್ದ ಪ್ರತಾಪ್ * 15 ದಿನಗಳ ಹಿಂದೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಪರಾರಿಯಾಗಿದ್ದ ರಂಗು

ಬೆಂಗಳೂರು(ಅ. 28): ಸಿನಿಮಾ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡೋದನ್ನ ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ನಿರ್ಮಾಪಕ ಸರಕಳ್ಳತನ ಮಾಡಿದ್ದಾನೆ. ಸ್ಯಾಂಡಲ್ವುಡ್​'ನ ಫಿಲಂ ಪ್ರೊಡ್ಯೂಸರ್ ಪ್ರತಾಪ್​ ರಂಗು ಅಲಿಯಾಸ್ ರಂಗ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಪ್ರತಾಪ್ ರಂಗುನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

15 ದಿನಗಳ ಹಿಂದಷ್ಟೇ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಕೂದಲೆಳೆ ಅಂತರದಲ್ಲಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದ. ಆ ಬಳಿಕ ಆನಂತಪುರ ಜಿಲ್ಲೆಯ ಮಡಕಸೀರಾದಲ್ಲಿ ಈತ ತಲೆಮರೆಸಿಕೊಂಡಿರುತ್ತಾನೆ. ನಿನ್ನೆ ಸಂಜೆ ವಿಧಾನಸೌಧ ಸಮೀಪದ ಎಂಎಸ್​ ಬಿಲ್ಡಿಂಗ್ ಬಳಿ ಈತ ಇರುವ ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಪ್ರತಾಪ್'ನನ್ನು ಹಿಡಿಯುತ್ತಾರೆ.

ಈತ ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯು ‘ಡಬಲ್ ಮೀನಿಂಗ್ ’ ಎಂಬ ಚಿತ್ರದ ಸಿನಿಮಾ ನಿರ್ಮಾಪಕನಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್