
ನವದೆಹಲಿ(ಮೇ.25): ಸೆಲೆಬ್ರಿಟಿಗಳು ಸಾಮಾನ್ಯವಾಗಿ ಚರ್ಚೆಯಲ್ಲಿರುತ್ತಾರೆ. ಆದರೆ ಇತ್ತೀಚೆಗೆ ಸೆಲೆಬ್ರಿಟಿಗಳ ಮಕ್ಕಳು ಸುದ್ದಿಯಲ್ಲಿರುತ್ತಾರೆ. ಉದಾಹರಣೆಗೆ ಪ್ರಖ್ಯಾತ ನಟಿ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್ ಫೋಟೋಶೂಟ್, ಶಾರುಖ್ ಮಗಳು ಸಹಾನಾ ಖಾನ್ ಆ್ಯಕ್ಟಿಂಗ್'ನ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಇದೀಗ ತನ್ನ ಫೋಟೋಶೂಟ್'ನಿಂದ ಸುದ್ದಿಯಾಗಿದ್ದು ಬಾಲಿವುಡ್ ಸ್ಟಾರ್ ಮಗಳಲ್ಲ ಬದಲಾಗಿ ಈಕೆ ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದವಳಾಗಿದ್ದಾಳೆ. ಹೌದು ಈ ಬಾರಿ ಚರ್ಚೆಯಲ್ಲಿರುವುದು ಟೀಂ ಇಂಡಿಯಾದ ಮಾಜಿ ನಾಯಕ ದಸೌರವ್ ಗಂಗೂಲಿಯ ಮಗಳು ಸಾನಾ ಗಂಗೂಲಿ. ಈಕೆಯ ಮೊದಲ ಫೋಟೋಶೂಟ್ ವೈರಲ್ ಆಗಿದ್ದು, ಇವುಗಳಲ್ಲಿ ಸಾನಾ ತನ್ನ ತಂದೆ ಸೌರವ್ ಗಂಗೂಲಿಯೊಂದಿಗೆ ಕಾಣಿಸಿಕೊಂಡಿದ್ದಾಳೆ.
ಸಾನಾ ಗಂಗೂಲಿ ಬಾಲ್ಯದಿಂದಲೇ ಸಾಮಾನ್ಯವಾಗಿ ತನ್ನ ತಂದೆ ಆಡುತ್ತಿದ್ದ ಪ್ರತಿ ಪಂದ್ಯಗಳಲ್ಲೂ ಕಾಣ ಸಿಗುತ್ತಿದ್ದಳು. ಇದೀಗ ಫೋಟೋಶೂಟ್'ನ್ಲಲೂ ತಂದೆಯೊಂದಿಗೆ ಕಂಡು ಬಂದಿದ್ದಾಳೆ. ಸುಪ್ರಸಿದ್ಧ ನೃತ್ಯಗಾತಿ ಹಾಗೂ ಸೌರವ್ ಗಂಗೂಲಿಯ ಪತ್ನಿ ಡೋನಾ ಗಂಗೂಲಿ ತನ್ನ ಪತಿ ಹಾಗೂ ತನ್ನ ಮಗಳ ಈ ಫೋಟೋಗಳನ್ನು ಫೇಸ್'ಬುಕ್'ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಡೋನಾ ಈ ಪೋಸ್ಟ್'ನಲ್ಲಿ ಇದು ಸಾನಾಳ ಮೊದಲ ಫೋಟೋಶೂಟ್ ಎಂದು ಬರೆದುಕೊಂಡಿದ್ದಾರೆ.
ಸಾನಾ ಗಂಗೂಲಿ ಕೂಡಾ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿದ್ದು, ತನ್ನ ತಂದೆಯೊಂದಿಗೆ ತೆಗೆಸಿಕೊಂಡ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.