1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಮಾಜಿ ನಟಿ ಪೂಜಾ ದಾದ್ವಾಲ್, ಈಗ ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ.
ಬೆಂಗಳೂರು (ಮಾ.20): 1990ರ ದಶಕದ ಚಲನಚಿತ್ರವಾದ ‘ವೀರಗತಿ’ಯಲ್ಲಿ ಖ್ಯಾತನಟ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಮಾಜಿ ನಟಿ ಪೂಜಾ ದಾದ್ವಾಲ್, ಈಗ ಕ್ಷಯರೋಗ ಮತ್ತು ಶ್ವಾಸಕೋಶದ ಸಂಬಂಧಿ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ.
ಪೂಜಾ ದಾದ್ವಾಲ್ರನ್ನು 15 ದಿನಗಳ ಹಿಂದೆ ಮುಂಬೈಯ ಸೆವಿರಿ ಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಅವಳ ಪತಿ ಮತ್ತು ಕುಟುಂಬದ ಸದಸ್ಯರು ಅವಳಿಂದ ದೂರ ಸರಿದಿದ್ದಾರೆ. ಹೀಗಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಹಣವಿಲ್ಲದೆ, ನಟಿ ಪೂಜಾ ದಾದ್ವಾಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಹೀಗಾಗಿ ಪೂಜಾ ಹಿಂದೆ ತನ್ನ ಜೊತೆ ನಟಿಸಿದ್ದ ನಟ ಸಲ್ಮಾನ್ ಖಾನ್ರಿಂದ ಸಹಾಯ ಕೋರಿದ್ದಾಳೆ. ‘ಚಾರಿಟಿ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಸಂಸ್ಥಾಪಕರಾಗಿರುವ ಸಲ್ಮಾನ್ ಖಾನ್ ಭಾರತದಲ್ಲಿ ಶಿಕ್ಷಣ & ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಹೀಗಾಗಿ ನನ್ನ ಈ ಸ್ಥಿತಿ ನೋಡಿದ್ರೆ ಖಂಡಿತವಾಗಿಯೂ ಸಲ್ಮಾನ್ ಖಾನ್ ನನಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಪೂಜಾ ದಾದ್ವಾಲ್ ಇದ್ದಾಳೆ.