
ಮುಂಬೈ[ಆ.11] ಟ್ರಾಫಿಕ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಮೂವರ ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿದೆ. ದಂಡ ಕಟ್ಟದ ಕಾರಣಕ್ಕೆ ಅವರ ಹೆಸರು ಮುಂಚೂಣಿಗೆ ಬಂದಿದೆ. ಬಾಲಿವುಡ್ ನಟ ಅರ್ಜುನ್ ಕಪೂರ್, ಕಪಿಲ್ ಶರ್ಮಾ ಮತ್ತು ಸಲ್ಮಾನ್ ಖಾನ್ ಕುಟುಂಬದ ಸದಸ್ಯರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಬಹಳ ದೀರ್ಘ ಕಾಲದಿಂದ ದಂಡ ಸಹ ಕಟ್ಟಿಲ್ಲ.
119 ಕೋಟಿ ರು. ಗೂ ಅಧಿಕ ಹಣ ಮುಂಬೈ ಪೊಲೀಸರಿಗೆ ದಂಡದ ರೂಪದಲ್ಲಿ ಬರಬೇಕಿದೆ. ಓವರ್ ಸ್ಪೀಡ್, ಸಿಗ್ನಲ್ ಜಂಪ್, ನೋ ಎಂಟ್ರಿ ಸಂಚಾರ ಎಲ್ಲವೂ ಇದರಲ್ಲಿ ಸೇರುತ್ತದೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಗೆ ಸೇರಿದ ಕಾರ್ ನಾಲ್ಕು ಬಾರಿ ಟ್ರಾಫಿಕ್ ನಿಯಮಮ ಉಲ್ಲಂಘಿಸಿದ್ದು 4000 ರೂ.ಗೂ ಅಧಿಕ ದಂಡ ಕಟ್ಟಬೇಕಾಗಿದೆ.
ಕಪಿಲ್ ಶರ್ಮಾ 2000 ರೂ. ದಂಡ ಕಟ್ಟಬೇಕು. ಬಿಜೆಪಿ ನಾಯಕ ದಿವಾಕರ್ ರಾವತ್, ಎನ್ ಸಿಪಿ ನಾಯಕ ಅಜಿತ್ ಪವಾರ್ ಸಹ ದಂಡ ಬಾಕಿ ಇಟ್ಟುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.