ಬೆಂಗಳೂರಿನ 87 ಪಬ್'ಗಳು ಕ್ಲೋಸ್

By Suvarna Web DeskFirst Published Jan 10, 2018, 4:15 PM IST
Highlights

ಬೆಂಕಿ ಅನಾಹುತದಿಂದ ಮುಂಬೈ ಹಾಗೂ ಬೆಂಗಳೂರು ಸೇರಿದಂತೆ  ಪಬ್, ರೆಸ್ಟೋರೆಂಟ್'ಗಳಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದ ದೇಶಾದ್ಯಂತ ಪಬ್'ಗಳನ್ನು ಮುಚ್ಚಲು ನಾಗರೀಕ ಸಚಿವಾಲಯ ನಿರ್ಧರಿಸಿದೆ.

ನವದೆಹಲಿ (ಜ.10): ಬೆಂಕಿ ಅನಾಹುತದಿಂದ ಮುಂಬೈ ಹಾಗೂ ಬೆಂಗಳೂರು ಸೇರಿದಂತೆ  ಪಬ್, ರೆಸ್ಟೋರೆಂಟ್'ಗಳಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದ ದೇಶಾದ್ಯಂತ ಇರುವ ಪಬ್'ಗಳನ್ನು ಮುಚ್ಚಲು ನಾಗರೀಕ ಸಚಿವಾಲಯ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸದ ಪಬ್'ಗಳನ್ನು ಮುಚ್ಚಲು ಬಿಬಿಎಂಪಿ ಕಾರ್ಯಗತವಾಗಿದೆ. ಈಗಾಗಲೇ 57 ಪಬ್'ಗಳನ್ನು ಮುಚ್ಚಲು ಸೂಚಿಸಿದೆ. 70 ಕ್ಕೂ ಹೆಚ್ಚು ಪಬ್, ರೆಸ್ಟೋರೆಂಟ್'ಗಳಿಗೆ ನೋಟಿಸ್ ನೀಡಿದೆ.

ಈ ಬಗ್ಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ,  ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಪಬ್, ಬಾರ್;ಗಳನ್ನು ನಡೆಸುತ್ತಿರುವವರು ಜವಾಬ್ದಾರಿಗಳನ್ನು ನಿಭಾಯಿಸಬೇಕು. ಅಗ್ನಿ ಸುರಕ್ಷತಾ  ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.   

click me!