ಫ್ಲಿಪ್‌ಕಾರ್ಟ್‌ ಸಂಸ್ಥಾಪಕ ಬನ್ಸಲ್‌ರಿಂದ ಬೆಂಗಳೂರಲ್ಲಿ ಹೊಸ ಕಂಪನಿ

Published : Dec 26, 2018, 10:25 AM IST
ಫ್ಲಿಪ್‌ಕಾರ್ಟ್‌ ಸಂಸ್ಥಾಪಕ  ಬನ್ಸಲ್‌ರಿಂದ ಬೆಂಗಳೂರಲ್ಲಿ ಹೊಸ ಕಂಪನಿ

ಸಾರಾಂಶ

ಫ್ಲಿಪ್‌ಕಾರ್ಟ್‌ ಸಂಸ್ಥಾಪಕ ಬನ್ಸಲ್‌ರಿಂದ ಬೆಂಗಳೂರಲ್ಲಿ ಹೊಸ ಸ್ಟಾರ್ಟಪ್‌ ಕಂಪನಿ | ಬಿಎಸಿ ಅಕ್ವಾಸಿಷೆನ್ಸ್‌ ಪ್ರೈ.ಲಿ ಎಂಬ ಹೊಸ ಕಂಪನಿಯನ್ನು ಸಚಿನ್‌ ಬೆಂಗಳೂರಿನ ಕೋರಮಂಗಲ ಬಳಿ ಸ್ಥಾಪಿಸಿದ್ದಾರೆ.

ನವದೆಹಲಿ (ಡಿ. 26): ಇತ್ತೀಚೆಗಷ್ಟೇ ಅಮೆರಿಕದ ಮೂಲದ ವಾಲ್‌ಮಾರ್ಟ್‌ ಸಂಸ್ಥೆಗೆ ಮಾರಾಟಗೊಂಡ, ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕ ಪೈಕಿ ಒಬ್ಬರಾದ ಸಚಿನ್‌ ಬನ್ಸಲ್‌, ಮತ್ತೆ ಬೆಂಗಳೂರಿನಲ್ಲೇ ತಮ್ಮ ಹೊಸ ಕಂಪನಿ ಸ್ಥಾಪಿಸಿದ್ದಾರೆ. 

ಬಿಎಸಿ ಅಕ್ವಾಸಿಷೆನ್ಸ್‌ ಪ್ರೈ.ಲಿ ಎಂಬ ಹೊಸ ಕಂಪನಿಯನ್ನು ಸಚಿನ್‌ ಬೆಂಗಳೂರಿನ ಕೋರಮಂಗಲ ಬಳಿ ಸ್ಥಾಪಿಸಿದ್ದಾರೆ. ಹೊಸ ಕಂಪನಿಯು ಅಂತರ್ಜಾಲ ಮತ್ತು ಮೊಬೈಲ್‌ ಆಧರಿತ ತಾಂತ್ರಿಕ ಮತ್ತು ತಂತ್ರಜ್ಞಾನ ಸೇವೆ ನೀಡುವ ವಲಯಗಳಲ್ಲಿ ಹೊಸ ಸ್ಟಾರ್ಟ್‌ಪ್‌ ಹುಟ್ಟುಹಾಕುವ ಮತ್ತು ಖರೀದಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ.

ಸಚಿನ್‌ ಬನ್ಸಲ್‌, ಫ್ಲಿಪ್‌ಕಾರ್ಟ್‌ನಲ್ಲಿ ತಾವು ಹೊಂದಿದ್ದ ಶೇ.5ರಷ್ಟುಪಾಲನ್ನು 7000 ಕೋಟಿ ರು. ಮಾರಾಟ ಮಾಡಿದ್ದರು. ಈ ಪೈಕಿ ಒಂದಷ್ಟುಹಣವನ್ನು ಅವರು ಈಗಾಗಲೇ ವಿವಿಧ ಸ್ಟಾರ್ಟಪ್‌ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ, ದಿನದಿಂದ ದಿನಕ್ಕೆ ಕುಳ್ಳ ಆಗ್ತಿದ್ದೇನೆ' ಜಿಲ್ಲಾಧಿಕಾರಿಗೆ ವಿಚಿತ್ರ ದೂರು ನೀಡಿದ ವಿದ್ಯಾವಂತ ಯುವಕ
400 ಅಂಗನವಾಡಿಯ 5500 ಮಕ್ಕಳಿಗೆ ಹಾಲು ಕೊಡದೇ ಅನ್ಯಾಯ, ಸರ್ಕಾರದ ವಿರದ್ಧ ಭುಗಿಲೆದ್ದ ಆಕ್ರೋಶ