
ಬೆಂಗಳೂರು: ರನ್ ಅಡಿಕ್ಟ್ಸ್ ಸಂಸ್ಥೆಯು, ಜೂನ್ 10 ರಂದು “ಗ್ರಾಮೀಣ ಮಕ್ಕಳ ವಿಧ್ಯಾಭ್ಯಾಸ” ಅನ್ನುವ ಧ್ಯೇಯೋದ್ದೇಶದೊಂದಿಗೆ ತನ್ನ 2ನೇ ವಾರ್ಷಿಕ ಓಟವನ್ನು ಆಯೋಜಿಸಿದೆ.
ಓಟವನ್ನು 3 ಕಿಮಿ, 5 ಕಿಮಿ ಮತ್ತು 10 ಕಿಮಿ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಬ್ಬ ಸ್ಪರ್ಧಿಗೂ ಒಂದು ಪದಕ, ಪ್ರಶಸ್ತಿ ಪತ್ರ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮದಿಂದ ಬರುವ ಎಲ್ಲಾ ಹಣವನ್ನೂ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸ, ಅಟೋಟ ಮತ್ತು ಆರೋಗ್ಯಕ್ಕೆ ಮೀಸಲಿಡಲ್ಪಡುತ್ತದೆ, ಎಂದು ಪ್ರಕಟಣೆಯು ತಿಳಿಸಿದೆ.
ಈ ವರ್ಷ, ಸಂಸ್ಥೆಯು ತನ್ನ ಓಟವನ್ನು ಪರಿಸರಸ್ನೇಹಿ ಓಟ ಎಂದು ಘೋಷಿಸಿದೆ. ಸುಮಾರು 2500 ಮಂದಿ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮವು, ಪ್ಲಾಸ್ಟಿಕ್ ಮತ್ತು ತಾಜ್ಯ ಮುಕ್ತ ವಾಗಲಿದ್ದು, ರೈಸ್ ಫೌಂಡೇಶನ್, ಈ ಒಂದು ಮಹತ್ ಕಾರ್ಯದಲ್ಲಿ ಕೈ ಜೋಡಿಸಿದ್ದು, ಕಾರ್ಯಕ್ರಮವು ಶೂನ್ಯ ತ್ಯಾಜ್ಯ ಮತ್ತು ಪರಿಸರಸ್ನೇಹಿಯಾಗಲು ಪಣತೊಟ್ಟಿದೆ.
ಕಾರ್ಯಕ್ರಮದಲ್ಲಿ ಆಹಾರ ತ್ಯಾಜಗಳನ್ನು ಗೊಬ್ಬರವಾಗಿ ಪರಿವರ್ತಿಸಿ, ಮುಂಬರುವ ದಿನಗಳಲ್ಲಿ ಸುತ್ತಮುತ್ತಲಿನ ಗಿಡಗಳಿಗೆ ಬಳಸುವ ಯೋಜನೆಯೂ ಇದೆ. ಕಾಗದದ ಬಳಕೆ ಕನಿಷ್ಟ ಮಟ್ಟದಲ್ಲಿದ್ದು, ಎಲ್ಲಾ ನೀರು ಒದಗಿಸುವ ಕೌಂಟರ್ ಗಳಲ್ಲಿ ಪುನಃ ಬಳಸಬಹುದಾದ ಲೋಟಗಳನ್ನು ಬಳಸಲಾಗುತ್ತಿದೆ.
ರನ್ ಅಡಿಕ್ಟ್ಸ್, ಯಾವುದೇ ವಾಣಿಜ್ಯೋದ್ದೇಶಗಳಿಲ್ಲದೆ, ಓಟ ಹಾಗು ಉತ್ತಮ ಆರೋಗ್ಯದ ದೃಷ್ಟಿಯುಳ್ಳ ಹಲವು ವ್ಯಕ್ತಿಗಳ ಒಂದು ವೇದಿಕೆಯಾಗಿದ್ದು , ರಾಜರಾಜೇಶ್ವರಿನಗರ ಮತ್ತು ಸುತ್ತ ಮುತ್ತಲಿನ ಲೇಔಟ್ ಗಳ ಸದಸ್ಯರನ್ನು ಹೊಂದಿದೆ.
ಈ ಸಂಸ್ಥೆಯು ವಾಟ್ಸಾಪ್ ನಲ್ಲಿ ಸುಮಾರು 600 ಕ್ಕೂ ಹೆಚ್ಚು ಮತ್ತು ಫೇಸ್‍ಬುಕ್ ನಲ್ಲಿ 2000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ನಗರದಲ್ಲಿ ಒಂದು ದೊಡ್ಡ ಓಟಗಾರರ ಗುಂಪಾಗಿದೆ. ಸಂಸ್ಥೆಯು ಪ್ರತಿ ವಾರ ವ್ಯಾಯಮ ತರಬೇತಿ ಶಿಬಿರಗಳು ಮತ್ತು ಮಾಸಿಕ ಓಟಗಳನ್ನು ನಡೆಸುತ್ತಾ ಸುತ್ತಮುತ್ತಲಿನ ಜನರಲ್ಲಿ ಓಟ ಮತ್ತು ಉತ್ತಮ ಅರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.