ಕಮಲ್‌ನಾಥ್ ಸ್ವಿಡ್ಜರ್‌ಲ್ಯಾಂಡ್ ಪ್ರವಾಸಕ್ಕೆ 1.58 ಕೋಟಿ ರೂ. ವ್ಯಯ!

Published : Apr 24, 2019, 03:25 PM ISTUpdated : Apr 24, 2019, 03:26 PM IST
ಕಮಲ್‌ನಾಥ್ ಸ್ವಿಡ್ಜರ್‌ಲ್ಯಾಂಡ್ ಪ್ರವಾಸಕ್ಕೆ 1.58 ಕೋಟಿ ರೂ. ವ್ಯಯ!

ಸಾರಾಂಶ

ಮಧ್ಯಪ್ರದೇಶ ಸರ್ಕಾರ ಸಿಎಂ ಸ್ವಿಡ್ಜರ್‌ಲ್ಯಾಂಡ್ ಪ್ರವಾಸಕ್ಕೆ ಖರ್ಚಾದ ಹಣ ಎಷ್ಟು?| ಕಮಲ್‌ನಾಥ್ ಮತ್ತು ಹಿರಿಯ ಅಧಿಕಾರಿಗಳ ವಾಸ್ತವ್ಯಕ್ಕೆ 1.58 ಕೋಟಿ ರೂ. ವ್ಯಯ| ಜನೆವರಿಯಲ್ಲಿ ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆ| RTI ಅರ್ಜಿಗೆ ಮಧ್ಯಪ್ರದೇಶ ಸಿಎಂ ಕಚೇರಿಯಿಂದ ಉತ್ತರ|  

ಭೋಪಾಲ್(ಏ.24): ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಹೂಡಿಕೆದಾರರನ್ನು ಸೆಳೆಯಲು ಕಳೆದ ಜನೆವರಿಯಲ್ಲಿ ಸ್ವಿಡ್ಜರ್‌ಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸಿಎಂ ಮತ್ತು ಮೂವರು ಅಧಿಕಾರಿಗಳ ವಾಸ್ತವ್ಯಕ್ಕೆ 1.58 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸಲ್ಲಿಸಿದ್ದ RTI ಅರ್ಜಿಗೆ ಉತ್ತರಿಸಿರುವ ಸಿಎಂ ಕಚೇರಿ, ಕಮಲ್‌ನಾಥ್, ಮಧ್ಯಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಆರ್. ಮೋಹಾಂತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಶೋಕ್ ಬರ್ನವಾಲ್, ಹಾಗೂ ಕೈಗಾರಿಕಾ ನೀತಿ ಮತ್ತು ಹೂಡಿಕೆ ಪ್ರಚಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಸುಲೇಮಾನ್ ಅವರ ವಾಸ್ತವ್ಯಕ್ಕೆ ಬರೋಬ್ಬರಿ 1.58 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ತಿಳಿಸಿದೆ.

ಕಳೆದ ಜನೆವರಿಯಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಸೇರಿದಂತೆ ರಾಜ್ಯ ಸರ್ಕಾರದ ಈ ಮೂವರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರವಾಸದ ವೇಳೆ ಕಮಲ್‌ನಾಥ್ ಸೇರದಿಂತೆ ಮೂವರೂ ಹಿರಿಯ ಅಧಿಕಾರಿಗಳು ದುಬಾರಿ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದು, ದಾವೋಸ್ ನಗರದಲ್ಲಿ ಸಂಚರಿಸಲು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಲಕ್ಸುರಿ ಕಾರಿಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23 ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?