
ಬೆಂಗಳೂರು(ಡಿ.02): ಎಸ್'ಟಿಪಿ ಕಾಯ್ದೆ ವಿರೋಧಿಸಿ ಬೆಂಗಳೂರಿನ RT ನಗರ ಅಪಾರ್ಟ್'ಮೆಂಟ್ ನಿವಾಸಿಗಳ ಪ್ರತಿಭಟನೆ ನಡೆಸಿದ್ದಾರೆ.
ಎರಡು ಫ್ಲೋರ್ ಮೇಲ್ಪಟ್ಟು ಇರುವ ಅಪಾರ್ಟ್ಮೆಂಟ್'ಗಳಲ್ಲಿ ತ್ಯಾಜ ನೀರು ಸಂಸ್ಕರಣಾ ಘಟಕ ಅಳವಡಿಕೆಯನ್ನ ಅಳವಡಿಸಿಕೊಳ್ಳುವುದನ್ನ ಕಡ್ಡಾಯಗೊಳಿಸಿದೆ. ಇದಕ್ಕೆ ಅಪಾರ್ಟ್'ಮೆಂಟ್ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಳೆ ಅಪಾರ್ಟ್'ಮೆಂಟ್'ಗಳಲ್ಲಿ ಜಾಗದ ಕೊರತೆಯಿದೆ. ಹೀಗಾಗಿ ಎಸ್'ಟಿಪಿ ಅಳವಡಿಸಲು ಸಾಧ್ಯವಿಲ್ಲ ಎಂದು ನಿವಾಸಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ಎಸ್'ಟಿಪಿ ಕಡ್ಡಾಯಗೊಳಿಸಿ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಯಾರು ಎಸ್'ಟಿಪಿ ಅಳವಡಿಸಿಕೊಂಡಿಲ್ಲವೋ ಅಂತವರ ವಿರುದ್ಧ ಜಲಮಂಡಳಿ ಅಪಾರ್ಟ್'ಮೆಂಟ್'ಗಳಿಗೆ ದಂಡ ಕೂಡ ಹಾಕುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.