RSS ಮುಖ್ಯಸ್ಥ ಸೇರಿ 6 ಹಿರಿಯ ನಾಯಕರು ಟ್ವಿಟರ್‌ಗೆ ಪ್ರವೇಶ!

Published : Jul 02, 2019, 08:50 AM ISTUpdated : Jul 02, 2019, 12:40 PM IST
RSS ಮುಖ್ಯಸ್ಥ ಸೇರಿ 6 ಹಿರಿಯ ನಾಯಕರು ಟ್ವಿಟರ್‌ಗೆ ಪ್ರವೇಶ!

ಸಾರಾಂಶ

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ ಸೇರಿ ಸಂಘದ ನಾಯಕರು ಟ್ವಿಟರ್‌ಗೆ| ಟ್ವಿಟರ್‌ ಖಾತೆ ತೆರೆದ ಹೊರತಾಗಿಯೂ ಈ ನಾಯಕರು, ಅದನ್ನು ಸಂಘಟನೆಯ ಮಾಹಿತಿ ಹಂಚಿಕೆ ಮಾಡಲು ಮತ್ತು ಜನರೊಂದಿಗೆ ಬೆರೆಯಲು ಬಳಸುವ ಸಾಧ್ಯತೆ ಕಡಿಮೆ

ನವದೆಹಲಿ[ಜು.02]: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಸಂಘ ಪರಿವಾರದ 6 ಹಿರಿಯ ನಾಯಕರು ಸೋಮವಾರ ಟ್ವಿಟರ್‌ಗೆ ಪ್ರವೇಶ ಮಾಡಿದ್ದಾರೆ.

ಭಾಗವತ್‌ ಜೊತೆಗೆ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಜೋಶಿ, ಮೂವರು ಜಂಟಿ ಕಾರ್ಯದರ್ಶಿಗಳಾದ ಸುರೇಶ್‌ ಸೋನಿ, ಕೃಷ್ಣ ಗೋಪಾಲ್‌, ವಿ. ಭಾಗಯ್ಯ, ಸಂಘದ ಪ್ರಚಾರ ವಿಭಾಗದ ಮುಖ್ಯಸ್ಥ ಅರುಣ್‌ ಕುಮಾರ್‌ ಮತ್ತು ಸಂಘದ ಮತ್ತೊಬ್ಬ ಹಿರಿಯ ನಾಯಕ ಅನಿರುದ್ಧ್ ದೇಶಪಾಂಡೆ ಟ್ವಿಟರ್‌ ಸೇರಿದವರು.

ಆದರೆ ಟ್ವಿಟರ್‌ ಖಾತೆ ತೆರೆದ ಹೊರತಾಗಿಯೂ ಈ ನಾಯಕರು, ಅದನ್ನು ಸಂಘಟನೆಯ ಮಾಹಿತಿ ಹಂಚಿಕೆ ಮಾಡಲು ಮತ್ತು ಜನರೊಂದಿಗೆ ಬೆರೆಯಲು ಬಳಸುವ ಸಾಧ್ಯತೆ ಕಡಿಮೆ. ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ತಾವೇ ಖಾತೆ ಆರಂಭ ಮಾಡಲು ಈ ನಾಯಕರು ನಿರ್ಧರಿಸದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..