1000 ರೂ. ನೋಟು ಮತ್ತೆ ಚಾಲನೆಗೆ

By Suvarna Web DeskFirst Published Aug 28, 2017, 6:04 PM IST
Highlights

ಆರ್'ಬಿಐ ಕಳೆದ ವಾರವಷ್ಟೆ ನೂತನ 200 ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ.

ನವದೆಹಲಿ(ಆ.28): ಕಳೆದ ವರ್ಷದ ನವೆಂಬರ್'ನಲ್ಲಿ 1000 ರೂ. ಮುಖಬೆಲೆಯ ನೋಟುಗಳನ್ನು ಅಪಮೌಲ್ಯಿಕರಣಗೊಂಡಿದ್ದ ಕೇಂದ್ರ ಸರ್ಕಾರ ಪುನಃ ಹೊಸ ರೂಪದಲ್ಲಿ ಮುದ್ರಿಸಲು ನಿರ್ಧರಿಸಿದೆ.

ಮಾಧ್ಯಮವೊಂದರ ವರದಿ ಪ್ರಕಾರ ಹೊಸದಾಗಿ ಮುದ್ರಣವಾಗುವ  1 ಸಾವಿರ ಮುಖ ಬೆಲೆಯ ನೋಟುಗಳು ತಾಂತ್ರಿಕವಾಗಿ ವಿವಿಧ ಭದ್ರತೆಗಳನ್ನು ಹೊಂದಿರುತ್ತವೆ. ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ನೂತನ ನೋಟುಗಳು ನಿಮ್ಮ ಕೈ ತಲುಪಲಿದೆ. ಈಗಾಗಲೆ ಮೈಸೂರು ಹಾಗೂ ಮಧ್ಯಪ್ರದೇಶದ ಸಲ್ಬೋನಿ'ಯಲ್ಲಿ ಮುದ್ರಣ ಕಾರ್ಯಗಳು ನಡೆಯುತ್ತಿವೆ. ಆರ್'ಬಿಐ ಕಳೆದ ವಾರವಷ್ಟೆ ನೂತನ 200 ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ.

 

click me!