
ನವದೆಹಲಿ(ಮಾ.24): ಭಾರತದ ಮೋಟರ್'ಸೈಕಲ್ ಮಾರುಕಟ್ಟೆಗೆ ಅತಿಶೀಘ್ರದಲ್ಲೇ 650ಸಿಸಿ ರಾಯಲ್ ಎನ್'ಫೀಲ್ಡ್ ಲಗ್ಗೆಯಿಡಲಿದೆ.
ಈಗಾಗಲೇ ಆಸ್ಟ್ರೇಲಿಯಾದಲ್ಲಿ 650ಸಿಸಿ ರಾಯಲ್ ಎನ್'ಫೀಲ್ಡ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇಂಟರ್'ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಮಾರುಕಟ್ಟೆಗೆ ಪರಿಚಯಿಸಲಿದ್ದು, ಮೊದಲು ಇಂಗ್ಲೆಂಡ್ ಹಾಗೂ ಯೂರೋಪಿಯನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ, ಏಪ್ರಿಲ್ ವೇಳೆಗೆ ಭಾರತದ ಮಾರುಕಟ್ಟೆಗೂ ಪ್ರವೇಶಿಸಲಿದೆ.
ವಿಶೇಷತೆಗಳೇನು..?
ಹೊಸ ಈ 2 ಬೈಕ್'ಗಳು ರೆಟ್ರೋ ಶೈಲಿಯಲ್ಲಿವೆ. ರಾಯಲ್ ಎನ್'ಫೀಲ್ಡ್ ಇಂಟರ್'ಸೆಪ್ಟರ್ ಉತ್ತಮ ಕ್ಷಮತೆ ಕಾಪಾಡಲು ಆಯಿಲ್ ಕೂಲರ್ ವ್ಯವಸ್ಥೆಯಿದೆ. ಅಲ್ಲದೇ ಮುಂದೆ 320mm ಹಿಂದೆ 240 ಡಿಸ್ಕ್ ಬ್ರೇಕ್ ಸೌಲಭ್ಯವಿದೆ, ಜತೆಗೆ ABS(Anti Break Lock System) ಕೂಡಾ ಇದೆ.
ಸ್ಪರ್ಧಾತ್ಮಕ ಬೆಲೆ: ಈ 2 ಬೈಕ್'ಗಳ ಬೆಲೆ 3.5 ಲಕ್ಷ ಮೀರುವುದಿಲ್ಲ ಎನ್ನಲಾಗಿದ್ದು, ಒಂದು ವೇಳೆ ಈ ಬೆಲೆಗೆ 650ಸಿಸಿ ಬೈಕ್ ಸಿಕ್ಕರೆ ಉಳಿದ ಕಂಪನಿಗಳ ಬೈಕ್'ಗಳಿಗಿಂತ ಅಗ್ಗವೆನಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.