
ಬೆಂಗಳೂರು[ಮಾ.07]: ಸಿಎಂ ಸ್ವಕ್ಷೇತ್ರ ರಾಮನಗರದಲ್ಲಿ ಪುಂಡರ ಆಟ ಹೆಚ್ಚಾಗಿದೆ. ಶಿವರಾತ್ರಿ ಹಬ್ಬದ ದಿನದಂದು ಹಾಡಹಗಲೇ ಕಾರಿನಲ್ಲಿ ಗನ್ ಹಿಡಿದು ನಡುರಸ್ತೆಯಲ್ಲೇ ರಾಜಾ ರೋಷವಾಗಿ ಕಾರಿನಲ್ಲಿ ಓಡಾಡುತ್ತಿದ್ದಾರೆ.
KA 02 Z 7031 ನಂಬರ್ನ ಕಾರಿನಲ್ಲಿ ಗನ್ ಹಿಡಿದು ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಗನ್ ಹಿಡಿದು ದಾರಿಯುದ್ದಕ್ಕೂ ಜನರನ್ನು ಹೆದರಿಸಿದ್ದಾನೆ. ಇನ್ನು ಈಗಾಗಲೇ ಸಿನೀಮಿಯ ರೀತಿಯ ಈ ಬೆದರಿಕೆಗೆ ಜನರು ಆತಂಕಗೊಂಡಿದ್ದಾರೆ.
ಸಿಎಂ ಕ್ಷೇತ್ರದಲ್ಲೇ ಈ ರೀತಿ ಪುಂಡರ ಆಟ ಹೆಚ್ಚಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗನ್ ಪ್ರದರ್ಶಿಸಿದ್ದಕ್ಕೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಪ್ರಕಾರ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಬೇಕಿದೆ. ಆದರೆ ಈವರೆಗೂ ಪೊಲೀಸರು ಆತ ಯಾರು ಎಂಬುದನ್ನು ಇನ್ನೂ ಕೂಡಾ ಕಂಡು ಹಿಡಿದಿಲ್ಲ.
"
ಸುವರ್ಣ ನ್ಯೂಸ್ ಈಗಾಗಲೇ ಪೊಲೀಸರಿಗೆ ಸಾಕ್ಷಿ ಕೊಟ್ಟಿದ್ದು, ಕ್ರಮ ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.