ರೊಹಿಂಗ್ಯ ಮುಸ್ಲಿಮರ ಗಡಿಪಾರು: ಸರ್ಕಾರದ ಕ್ರಮವನ್ನು ಖಂಡಿಸಿದ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ

By Suvarna Web DeskFirst Published Sep 11, 2017, 6:24 PM IST
Highlights

ಮ್ಯಾನ್ಮಾರ್ ಸೇನೆಯ ‘ಕ್ರೂರ ಕಾರ್ಯಚರಣೆ’ಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯು, ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ ರೊಹಿಂಗ್ಯ ಮುಸ್ಲಿಮರನ್ನು  ಹೊರಹಾಕುವ ಭಾರತ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ.

ಜಿನೆವಾ: ಮ್ಯಾನ್ಮಾರ್ ಸೇನೆಯ ‘ಕ್ರೂರ ಕಾರ್ಯಚರಣೆ’ಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯು, ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ ರೊಹಿಂಗ್ಯ ಮುಸ್ಲಿಮರನ್ನು  ಹೊರಹಾಕುವ ಭಾರತ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದೆ.

ದಾಳಿಗೊಳಗಾಗಿರುವ ರೊಹಿಂಗ್ಯಗಳನ್ನು ಹೊರಹಾಕುವ ಭಾರತದ ಕ್ರಮ ಖಂಡನಾರ್ಹ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿ ಮುಖ್ಯಸ್ಥ ಝೈದ್ ರಾದ್ ಅಲ್ ಹುಸೇನ್ ಮಂಡಳಿಯ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

ಭಾರತ ಪ್ರವೇಶಿಸಿರುವ 40 ಸಾವಿರ ನಿರಾಶ್ರಿತರ ಪೇಕಿ 16 ಸಾವಿರ ಮಂದಿ ನಿರಾಶ್ರಿತ ದಾಖಲೆಗಳನ್ನು ಪಡೆಸಿದ್ದಾರೆ ಎಂದು ಹೇಳಿರುವ ಅವರು, ಭಾರತವು ಅಂತರಾಷ್ಟ್ರೀಯ ಕಾನೂನುಗಳ ಪ್ರಕಾರ ನಿರಾಶ್ರಿತರನ್ನು ಅಪಾಯವಿರುವ ಸ್ಥಳಕ್ಕೆ ವಾಪಾಸು ಕಳುಹಿಸುವಂತಿಲ್ಲ, ಎಂದು ಹೇಳಿದ್ದಾರೆ.

ಮಯನ್ಮಾರ್’ನಲ್ಲಿ ಸುಮಾರು 10 ಲಕ್ಷದಷ್ಟು ಸಂಖ್ಯೆಯಲ್ಲಿರುವ ರೊಹಿಂಗ್ಯ ಸಮುದಾಯದ ಮುಸ್ಲಿಮರನ್ನು ‘ಇವರು ನಮ್ಮ ದೇಶದವರಲ್ಲ, ಅಕ್ರಮ ವಲಸಿಗರು’ ಎಂಬ ಹಣೆಪಟ್ಟಿ ಅಂಟಿಸಿ ಅಲ್ಲಿನ ಸೇನಾಪಡೆಯೇ ಖುದ್ದಾಗಿ ದೇಶದಿಂದ ಹೊರಹಾಕುತ್ತಿದೆ.

ಸೇನಾಪಟಡೆಯು ನಡೆಸುತ್ತಿರುವ ಜನಾಂಗೀಯ ಸ್ವಚ್ಛತೆ ಮಾದರಿಯ ಕಾರ್ಯಾಚರಣೆಯ ಬಿಸಿ ತಾಳಲಾರದೇ ಈಗಾಗಲೇ 2.5 ಲಕ್ಷದಷ್ಟು ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ  ಪಲಾಯನ ಮಾಡಿದ್ದರೆ, ಭಾರತಕ್ಕೆ ಸುಮಾರು 40 ಸಾವಿರ ಮಂದಿ ಪ್ರವೇಶಿಸಿದ್ದಾರೆ.

click me!